ಕರ್ನಾಟಕ

karnataka

ETV Bharat / state

ಮಕ್ಕಳ ಜತೆ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ : ಮಹಿಳೆಗಿತ್ತಾ ಅನೈತಿಕ ಸಂಬಂಧ?.. ಆಡಿಯೋ ಬಿಡುಗಡೆ - ಬೆಳಗಾವಿಯಲ್ಲಿ ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

ಕ್ರಿಷಾ ಬಗ್ಗೆ ಸಹೋದರಿ ವ್ಯಕ್ತಿಯೋರ್ವನ ಜೊತೆ ನಡೆಸಿದ ಸಂಭಾಷಣೆಯ ಆಡಿಯೋವನ್ನ ದಿನೇಶ್ ಬಿಡುಗಡೆ ಮಾಡಿದರು‌. ಮೃತ ಕ್ರಿಷಾ ಬಗ್ಗೆ ಸಹೋದರಿಯ ಜತೆಗೆ ಓರ್ವ ವ್ಯಕ್ತಿಯ ಮಾತುಕತೆ ನಡೆಸಿದ್ದ ಆಡಿಯೋ ಇದ್ದಾಗಿದ್ದು, ಇದು ಐದು ವರ್ಷಗಳ ಹಿಂದೆ ನಡೆದ ಆಡಿಯೋ ಸಂಭಾಷಣೆ ಎನ್ನಲಾಗಿದೆ..

ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

By

Published : Feb 13, 2022, 4:11 PM IST

ಬೆಳಗಾವಿ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೃಷಾ ಜೊತೆ ಅನೈತಿಕ ಸಂಬಂಧದ ಕುರಿತು ಸಹೋದರಿ ಜೊತೆ ವ್ಯಕ್ತಿಯೋರ್ವ ಮಾತನಾಡಿರೋ ಆಡಿಯೋವನ್ನು ಪತಿಯ ಸಹೋದರ ಸಂಬಂಧಿ ಇಂದು ಬಿಡುಗಡೆ ಮಾಡಿದ್ದಾರೆ.

ನಗರದ ಖಾಸಗಿ ಹೋಟೆಲ್​​​ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮನಿಷ್ ಸಹೋದರ ಸಂಬಂಧಿ ದಿನೇಶ ಕೇಶ್ವಾನಿ ಎಂಬುವರು ಮಾತನಾಡಿ, ಕೃಷಾ ಕುಟುಂಬಸ್ಥರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮನೀಷ್ ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದಿದ್ದಾರೆ.

ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

ಇದೇ ವೇಳೆ ಕೃಷಾ ಬಗ್ಗೆ ಸಹೋದರಿ ವ್ಯಕ್ತಿಯೋರ್ವನ ಜೊತೆ ನಡೆಸಿದ ಸಂಭಾಷಣೆಯ ಆಡಿಯೋವನ್ನ ದಿನೇಶ್ ಬಿಡುಗಡೆ ಮಾಡಿದರು‌. ಮೃತ ಕೃಷಾ ಬಗ್ಗೆ ಸಹೋದರಿಯ ಜತೆಗೆ ಓರ್ವ ವ್ಯಕ್ತಿಯ ಮಾತುಕತೆ ನಡೆಸಿದ್ದ ಆಡಿಯೋ ಇದ್ದಾಗಿದ್ದು, ಇದು ಐದು ವರ್ಷಗಳ ಹಿಂದೆ ನಡೆದ ಆಡಿಯೋ ಸಂಭಾಷಣೆ ಎನ್ನಲಾಗಿದೆ.

ಆದ್ರೆ, ಕಳೆದ ಫೆಬ್ರವರಿ 5ರಂದು ಮೃತ ಕೃಷಾ ಪತಿ ಮನೀಷ್‌ಗೆ ಆಡಿಯೋವನ್ನ ವಿಕಿ ಛಟಾನಿ ಕಳುಹಿಸಿದ್ದಾನೆ. ಈ ಸಂದರ್ಭದಲ್ಲಿ ಆಡಿಯೋ ಸಂಬಂಧ ಕೃಷಾ ಮನೆಯಲ್ಲಿ ಪತಿ ಮತ್ತು ಪತ್ನಿಯ ನಡುವೆ ವೈಮನಸ್ಸು ಪ್ರಾರಂಭವಾಗಿತ್ತು. ಆದರೆ, ಮೃತ ಕೃಷಾಗೆ ಮನೀಷ್ ಯಾವುದೇ ರೀತಿಯ ಕಿರುಕುಳ ನೀಡಿಲ್ಲ.

ಇನ್ನೂ ಮನಿಷ್ ಕೇಶ್ವಾನಿ ಕುಂಬಸ್ಥರು ಎಲ್ಲಿದ್ದಾರೆ ಎಂಬುದು ನಮಗೂ ಗೊತ್ತಿಲ್ಲ. ಮೃತ ಕೃಷಾ ಸಂಬಂಧಿಗಳು ಪ್ರತಿಭಟನೆ ಕೈಬಿಟ್ಟು ಅಂತ್ಯಕ್ರಿಯೆ ನಡೆಸಬೇಕು. ನಮಗೆ ಮೃತ ದೇಹ ಕೊಟ್ಟರೇ ನಾವೇ ಅಂತ್ಯಕ್ರಿಯೆ ಮಾಡುತ್ತೇವೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ನಾವು ಆಗ್ರಹಿಸುತ್ತೇವೆ. ನಾವು‌ ಪೊಲೀಸರಿಗೂ ಸಹಕರಿಸುತ್ತೇವೆ ಎಂದರು.

ಇದನ್ನೂ ಓದಿ : ಬೆಳಗಾವಿಯಲ್ಲಿ ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ ಪ್ರಕರಣ : ಗಂಡ ಮತ್ತು ಕುಟುಂಬಸ್ಥರ ಬಂಧನಕ್ಕೆ ಆಗ್ರಹ

For All Latest Updates

TAGGED:

ABOUT THE AUTHOR

...view details