ಕರ್ನಾಟಕ

karnataka

ETV Bharat / state

ತಂತ್ರ-ಪ್ರತಿತಂತ್ರ: ತಾರಕಕ್ಕೇರಿದ ಜಾರಕಿಹೊಳಿ ಸಹೋದರರ ನಡುವಿನ ಫೈಟ್ - undefined

ರಮೇಶ್​ ‌ಜಾರಕಿಹೊಳಿ ಅವರು ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಬೆಂಬಲಿಗರ ಸಭೆ ನಡೆಸಿ ಅಚ್ಛರಿ ಮೂಡಿಸಿದ್ದಾರೆ. ಈ ಮೂಲಕ ಜಾರಕಿಹೊಳಿ ಸಹೋದರರ ಮಧ್ಯದ ಫೈಟ್ ತಾರಕಕ್ಕೇರಿದೆ.

ರಮೇಶ್​ ‌ಜಾರಕಿಹೊಳಿ

By

Published : Apr 21, 2019, 9:30 PM IST

ಬೆಳಗಾವಿ:ಲೋಕಸಭೆ ಚುನಾವಣೆಯ ಮತದಾನಕ್ಕೆ ‌ಒಂದೇ ದಿನ ಬಾಕಿ ಉಳಿದಿದ್ದು, ಜಾರಕಿಹೊಳಿ ಸಹೋದರರ ನಡುವಿನ ಫೈಟ್ ತಾರಕಕ್ಕೇರಿದೆ.

ಗೋಕಾಕ ಕ್ಷೇತ್ರದಲ್ಲಿ ಸಚಿವ ಸತೀಶ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಪರ‌ ಪ್ರಚಾರ ಕೈಗೊಂಡಿದ್ದರು. ಅಲ್ಲದೆ ಇಂದು ‌ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಬಿಜೆಪಿ ಸೇರಿದರೆ ಪರಿಸ್ಥಿತಿ ಬೇರೆ ಆಗುತ್ತದೆ ಎಂದು ಬಹಿರಂಗವಾಗಿ ರಮೇಶ್​ಗೆ ಎಚ್ಚರಿಕೆ ನೀಡಿದರು.

ಈ ಬೆಳವಣಿಗೆ ಮಧ್ಯೆ ರಮೇಶ್​ ‌ಜಾರಕಿಹೊಳಿ ಅವರು ಸತೀಶ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್​ ವಿರೋಧಿ ರವಿ ಹಂಜಿ ಅವರನ್ನು ಭೇಟಿ‌ ಮಾಡಿ ಸಭೆ ನಡೆಸಿದ್ದಾರೆ.

ಶೀಘ್ರವೇ ರಾಜ್ಯದ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ. ಬಿಜೆಪಿ‌ ಅಧಿಕಾರಕ್ಕೆ‌ ಬಂದು ಯಡಿಯೂರಪ್ಪ ಸಿಎಂ‌ ಆಗುತ್ತಾರೆ.‌ ನಾನೇ‌ ಜಿಲ್ಲಾ ಉಸ್ತುವಾರಿ ‌ಸಚಿವನಾಗುತ್ತೇನೆ. ಹೀಗಾಗಿ ಈ‌ ಚುನಾವಣೆಯಲ್ಲಿ ‌ಬಿಜೆಪಿ ಬೆಂಬಲಿಸುವಂತೆ‌ ರಮೇಶ್​ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

For All Latest Updates

TAGGED:

ABOUT THE AUTHOR

...view details