ಚಿಕ್ಕೋಡಿ: ಸರ್ಕಾರಿ ಜಾಗದ ದುರುಪಯೋಗದ ಆರೋಪದ ಹಿನ್ನಲೆ ಅಧ್ಯಕ್ಷೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಭೋಜ ಗ್ರಾಮದಲ್ಲಿ ನಡೆದಿದೆ.
ನಕಲಿ ದಾಖಲೆ ಸೃಷ್ಟಿಸಿ ಉತಾರಾ ನೀಡಿದ ಆರೋಪದ ಮೇಲೆ ಚಿಕ್ಕೋಡಿ ತಾಲೂಕಿನ ಭೋಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಪ್ರಿಯಾ ಕಡೋಲೆ ಮೇಲೆ ಪ್ರಕರಣ ದಾಖಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಗಾಯರಾಣ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಉತಾರ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಗ್ರಾಮದಲ್ಲಿ 16 ಜನ ಫಲಾನುಭವಿಗಳನ್ನು ಗುರುತಿಸಿ, ನಕಲಿ ದಾಖಲೆ ನೀಡಿದ್ದಾರೆ. ಈ ಕುರಿತು ಸದಲಗಾ ಪೋಲಿಸ್ ಠಾಣೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಪಾಟೀಲ ದೂರು ಸಲ್ಲಿಸಿದ್ದಾರೆ.