ಕರ್ನಾಟಕ

karnataka

By

Published : Aug 4, 2020, 2:46 PM IST

Updated : Aug 4, 2020, 3:00 PM IST

ETV Bharat / state

ವಿಜಯಪುರ-ಅಥಣಿ-ಶೇಡಬಾಳ ರೈಲು ಯೋಜನೆ ಅನುಷ್ಠಾನಕ್ಕೆ ಭಾರತೀಯ ಕಿಸಾನ್ ಸಂಘ ಮನವಿ

ಭಾರತೀಯ ಕಿಸಾನ್ ಸಂಘ ಅಥಣಿ ಘಟಕದಿಂದ ಜನರ ಬಹು ವರ್ಷಗಳ ಬೇಡಿಕೆಯಾದ ಶೇಡಬಾಳ-ಅಥಣಿ-ವಿಜಯಪುರ ಹೊಸ ರೈಲು ಮಾರ್ಗ ಮಂಜೂರಾತಿಗಾಗಿ ಕೇಂದ್ರ ಸಚಿವ ಸುರೇಶ ಅಂಗಡಿಯವರಿಗೆ ಮನವಿ ಸಲ್ಲಿಸಲಾಯಿತು.

Bharatiya Kisan Sangha
ಶ್ರೀಶೈಲ ಜನಗೌಡ

ಅಥಣಿ:ಬಹುವರ್ಷಗಳ ಬೇಡಿಕೆಯಾದ ಶೇಡಬಾಳ-ಅಥಣಿ-ವಿಜಯಪುರ ಹೊಸ ರೈಲು ಮಾರ್ಗ ಮಂಜೂರಾತಿಗಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿಗೆ ಭಾರತೀಯ ಕಿಸಾನ್ ಸಂಘದಿಂದ ಮನವಿ ಸಲ್ಲಿಸಲಾಯಿತು.

ಅಥಣಿ ಆರ್​​ಟಿಓ ಕಚೇರಿ ಉದ್ಘಾಟನೆಗೆ ಬರಬೇಕಿದ್ದ ರೈಲ್ವೆ ಖಾತೆ, ರಾಜ್ಯ ಸಚಿವ ಶ್ರೀ ಸುರೇಶ ಅಂಗಡಿ ಅವರು ಕಾರಣಾಂತರಗಳಿಂದ ಗೈರಾಗಿದ್ದು, ಈ ವೇಳೆ ನೀಡಬೇಕಿದ್ದ ಮನವಿ ಪತ್ರವನ್ನು ಪೋಸ್ಟ್ ಮುಖಾಂತರ ಕಳುಹಿಸಲಾಗಿದೆ. 'ಈಟಿವಿ ಭಾರತ' ಮೂಲಕ ಅಥಣಿಯ ಭಾರತೀಯ ಕಿಸಾನ್ ಸಂಘದ ಉಪಾಧ್ಯಕ್ಷ ಶ್ರೀಶೈಲ ಜನಗೌಡ ಅವರು ಸಚಿವರಿಗೆ ಈ ಕುರಿತು ಮನವಿ ಮಾಡಿದರು. ‌

ರೈಲು ಯೋಜನೆ ಅನುಷ್ಠಾನಕ್ಕೆ ಭಾರತೀಯ ಕಿಸಾನ್ ಸಂಘ ಮನವಿ

ಈ ವೇಳೆ ಮಾತನಾಡಿದ ಶ್ರೀಶೈಲ ಜನಗೌಡ, ಉತ್ತರ ಕರ್ನಾಟಕ ಭಾಗದ ಜನರಿಗೆ 70 ವರ್ಷಗಳಿಂದ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಅಥಣಿ ಭಾಗದ ಜನರ ಬೇಡಿಕೆಯಾಗಿರುವ ಶೇಡಬಾಳ-ಅಥಣಿ-ವಿಜಯಪುರ ರೈಲು ಯೋಜನೆ ಅನುಷ್ಠಾನಕ್ಕೆ ತಾಲೂಕಿನ ಜನತೆ ಕಾದು ನೋಡುತ್ತಿದ್ದಾರೆ. ಶೀಘ್ರದಲ್ಲಿ ಈ ರೈಲು ಮಾರ್ಗಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಅಥಣಿ ತಾಲೂಕಿನ ಸುತ್ತಮುತ್ತ ಸಕ್ಕರೆ ಕಾರ್ಖಾನೆಗಳು, ಕೃಷಿ ಚಟುವಟಿಕೆ ವ್ಯವಹಾರ ಹಾಗೂ ಐತಿಹಾಸಿಕ ದೇವಾಲಯಗಳು ಇರುವುದರಿಂದ, ಸುರೇಶ್ ಅಂಗಡಿಯವರು ತುರ್ತು ಸಭೆ ನಡೆಸಿ ವಿಜಯಪುರ-ಅಥಣಿ-ಮೀರಜ್​ ಮಾರ್ಗದ ರೈಲನ್ನು ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ಸಾರ್ವಜನಿಕರ ಪರವಾಗಿ ಆಗ್ರಹಿಸುತ್ತೇನೆ ಎಂದು ತಿಳಿಸಿದರು.

Last Updated : Aug 4, 2020, 3:00 PM IST

ABOUT THE AUTHOR

...view details