ಬೆಳಗಾವಿ: ಜನರಿಗೆ ಎಷ್ಟೇ ಬುದ್ಧಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಹಣಕ್ಕಾಗಿ ಮಾರಣಾಂತಿಕ ಕೊರೊನಾವನ್ನೂ ಲೆಕ್ಕಿಸದೆ ಗುಂಪುಗುಂಪಲ್ಲಿ ಜನರು ಸೇರಿದ ಘಟನೆ ಬೈಲಹೊಂಗಲ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ನಲ್ಲಿ ನಡೆದಿದೆ.
ಜನಧನ್ ಖಾತೆಗೆ ಬಿದ್ದ 500 ರೂ. ಪಡೆಯಲು ಜೀವವನ್ನೇ ಪಣಕ್ಕಿಟ್ಟು ಕ್ಯೂನಲ್ಲಿ ನಿಂತ ಜನ - lockdown news
ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಜನಧನ್ ಅಕೌಂಟ್‍ಗೆ ಹಣ ಹಾಕಿದ್ದಾರೆ. ಇದನ್ನು ಪಡೆದುಕೊಳ್ಳಲು ಈ ರೀತಿಯಾಗಿ ಮುಗಿಬೀಳುತ್ತಿದ್ದಾರೆ.
![ಜನಧನ್ ಖಾತೆಗೆ ಬಿದ್ದ 500 ರೂ. ಪಡೆಯಲು ಜೀವವನ್ನೇ ಪಣಕ್ಕಿಟ್ಟು ಕ್ಯೂನಲ್ಲಿ ನಿಂತ ಜನ Bellary people violation of lockdown order](https://etvbharatimages.akamaized.net/etvbharat/prod-images/768-512-6921817-138-6921817-1587719860541.jpg)
ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೇವಲ ಐದು ನೂರು ರೂ. ಹಣ ಪಡೆಯಲು ಮುಗಿಬೀಳುತ್ತಿರುವುದು ದುರ್ದೈವ. ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಜನಧನ್ ಅಕೌಂಟ್‍ಗೆ ಹಣ ಹಾಕಿದ್ದಾರೆ. ಇದನ್ನು ಪಡೆದುಕೊಳ್ಳಲು ಈ ರೀತಿಯಾಗಿ ಮುಗಿಬೀಳುತ್ತಿದ್ದಾರೆ.
ಇತರೆ ಜನರು ಕೂಡ ಬ್ಯಾಂಕ್ನಲ್ಲಿ ಇಟ್ಟಿದ್ದ ಹಣವನ್ನು ಪಡೆದುಕೊಳ್ಳಲು ಬಂದಿದ್ದರು. ಯಾರೂ ಕೂಡ ಸಾಮಾಜಿಕ ಅಂತರವನ್ನಾಗಲಿ, ಮಾಸ್ಕ್ ಧರಿಸುವುದಾಗಲಿ ಮಾಡಲಿಲ್ಲ. ಕೊರೊನಾ ಬಂದಿದೆ ಎಂದು ಸರ್ಕಾರ ಜೀವನೋಪಾಯಕ್ಕೆ ಹಣ ಹಾಕಿದರೆ, ಜನರು ಮಾತ್ರ ಪ್ರಾಣ ತೆಗೆಯುವ ಕೊರೊನಾವನ್ನು ಲೆಕ್ಕಿಸದೆ ಹಣಕ್ಕಾಗಿ ಮುಗಿಬಿದ್ದಿದ್ದು ಕೆಲ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.