ಕರ್ನಾಟಕ

karnataka

ETV Bharat / state

ತೆಲಂಗಾಣ ರಾಜ್ಯದ ಟಿಎಸ್​ಆರ್​ಟಿಸಿ ನೌಕರರ ಪ್ರತಿಭಟನೆಗೆ ಕೆಎಸ್​ಆರ್​ಟಿಸಿ ಸಿಬ್ಬಂದಿ ಬೆಂಬಲ.. - ಕೆಎಸ್​ಆರ್​ಟಿಸಿ ಸಂಸ್ಥೆ

ತೆಲಂಗಾಣ ರಾಜ್ಯದಲ್ಲಿ ಟಿಎಸ್​ಆರ್​ಟಿಸಿ ಸಂಸ್ಥೆ ಸಾವಿರಾರು ನೌಕರರನ್ನು ಏಕಾಏಕಿ ವಜಾಗೊಳಿಸಿರೋದನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಗೆ ಕರ್ನಾಟಕ ರಾಜ್ಯದ ಕೆಎಸ್​ಆರ್​ಟಿಸಿ ಸಂಸ್ಥೆ ಸಿಬ್ಬಂದಿ ಮತ್ತು ಕಾರ್ಮಿಕರು ಬೆಂಬಲ ಸೂಚಿಸಿದ್ದಾರೆ.

ತೆಲಂಗಾಣ ರಾಜ್ಯದ ಟಿಎಸ್​ಆರ್​ಟಿಸಿ ನೌಕರರ ಪ್ರತಿಭಟನೆಗೆ ಕೆಎಸ್​ಆರ್​ಟಿಸಿ ಸಿಬ್ಬಂದಿ ಬೆಂಬಲ

By

Published : Oct 21, 2019, 10:18 PM IST

ಬಳ್ಳಾರಿ:ತೆಲಂಗಾಣ ರಾಜ್ಯದಲ್ಲಿ ಟಿಎಸ್​ಆರ್​ಟಿಸಿ ಸಂಸ್ಥೆ ಸಾವಿರಾರು ನೌಕರರನ್ನು ಏಕಾಏಕಿ ವಜಾಗೊಳಿಸಿರೋದನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಗೆ ಕರ್ನಾಟಕ ರಾಜ್ಯದ ಕೆಎಸ್​ಆರ್​ಟಿಸಿ ಸಂಸ್ಥೆ ಸಿಬ್ಬಂದಿ ಮತ್ತು ಕಾರ್ಮಿಕರು ಬೆಂಬಲ ಸೂಚಿಸಿದ್ದಾರೆ.

ತೆಲಂಗಾಣ ಟಿಎಸ್​ಆರ್​ಟಿಸಿ ನೌಕರರ ಪ್ರತಿಭಟನೆಗೆ ಕೆಎಸ್​ಆರ್​ಟಿಸಿ ಸಿಬ್ಬಂದಿ ಬೆಂಬಲ

ಬಳ್ಳಾರಿ ವಿಭಾಗದ ಕೆಎಸ್​ಆರ್​ಟಿಸಿ ಸಂಸ್ಥೆಯ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಹತ್ತಾರು ಮಂದಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಇಂದು ಜಮಾಯಿಸಿ ಕೆಲಕಾಲ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗೆ ಈ ಕುರಿತು ಮನವಿ ಸಲ್ಲಿಸಿದರು.

ಕೆಸಿಆರ್‌ ಅವರು, ಒಂದಲ್ಲ, ಎರಡಲ್ಲ ಬರೋಬ್ಬರಿ 48,000 ನೌಕರರನ್ನು ಸೇವೆಯಿಂದ ವಜಾಗೊಳಿಸಿರೋದು ಕಾನೂನು ಬಾಹಿರ. ಅಲ್ಲದೇ ಸರ್ವಾಧಿಕಾರಿ ಧೋರಣೆ. ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ಟಿಎಸ್​ಆರ್​ಟಿಸಿ ಸಂಸ್ಥೆಯ ನೌಕರರನ್ನು ಏಕಾಏಕಿ ವಜಾಗೊಳಿಸೋದು ತರವಲ್ಲ ಎಂದು ಕೆಎಸ್​ಆರ್​ಟಿಸಿ ಸ್ಟಾಫ್ ಅಂಡ್ ವರ್ಕರ್ಸ್​ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕಾಂತಯ್ಯ ಗುತ್ತರಗಿ ಮಠ ದೂರಿದ್ದಾರೆ.

ಕೆಎಸ್​ಆರ್​ಟಿಸಿ ಸಂಸ್ಥೆ ಸಿಬ್ಬಂದಿ ಮತ್ತು ಕಾರ್ಮಿಕರು ಸಂಘದ ಬಳ್ಳಾರಿ ವಿಭಾಗದ ಅಧ್ಯಕ್ಷ ಹೆಚ್ ಎ ಆದಿಮೂರ್ತಿ ಅವರು ಮಾತನಾಡಿ, ತೆಲಂಗಾಣ ರಾಜ್ಯದ ಟಿಎಸ್​ಆರ್​ಟಿಸಿ ಸಂಸ್ಥೆಯ ಅಂದಾಜು 48,000 ನೌಕರರನ್ನ ಸೇವೆಯಿಂದ ವಜಾಗೊಳಿಸಿರೋದರಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಲಿದೆ. ಇದೊಂದು ದೊಡ್ಡ ಶಾಪ ಆಗಿ ಪರಿಣಮಿಸುತ್ತೆ. ಕೂಡಲೇ ಸಿಎಂ ಕೆಸಿಆರ್‌ ಎಚ್ಚೆತ್ತು ವಜಾಗೊಳಿಸಿರುವ ನೌಕರರ ಸೇವೆಯನ್ನು ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ.

ABOUT THE AUTHOR

...view details