ಕರ್ನಾಟಕ

karnataka

By

Published : Mar 31, 2020, 2:29 PM IST

ETV Bharat / state

ದಂಡಂ ದಶಗುಣಂ ಅಸ್ತ್ರಕ್ಕೆ ಬ್ರೇಕ್: 496 ವಾಹನ ಸೀಜ್ ಮಾಡಿದ ಬೆಳಗಾವಿ ಪೊಲೀಸರು..!

ಬೆಳಗಾವಿ ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಘಿಸಿದ 496 ವಾಹನಗಳ ಸೀಜ್ ಮಾಡಿದ್ದಾರೆ. ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘಿಸಿದ 66 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

belgavi-police
ಬೆಳಗಾವಿ ಪೊಲೀಸ್​

ಬೆಳಗಾವಿ :ಲಾಕ್ ಡೌನ್ ಆದೇಶ ಉಲ್ಲಂಘಿಸುವವರ ವಿರುದ್ಧ ಪ್ರಯೋಗಿಸುತ್ತಿದ್ದ ದಂಡಂ ದಶಗುಣಂ ಅಸ್ತ್ರಕ್ಕೆ ಬ್ರೇಕ್ ಹಾಕಿರುವ ಜಿಲ್ಲಾ ಪೊಲೀಸರು ರೋಡಿಗಿಳಿಯುವ ಬೈಕ್ ಗಳನ್ನೇ ಸೀಸ್ ಮಾಡುತ್ತಿದ್ದಾರೆ.

ಬೆಳಗಾವಿ ಪೊಲೀಸ್​

ಬೆಳಗಾವಿ ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಘಿಸಿದ 496 ವಾಹನಗಳ ಸೀಜ್ ಮಾಡಿದ್ದಾರೆ. ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘಿಸಿದ 66 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಯಾರೂ ಸಹ ಲಾಕ್‌ಡೌನ್ ಆದೇಶ ಉಲ್ಲಂಘಿಸಬಾರದು. ಆದೇಶ ಉಲ್ಲಂಘಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಲಾಕ್‌ಡೌನ್‌ಗೆ ಆದೇಶ ನೀಡಲಾಗಿದ್ದು ಅದನ್ನು ಪಾಲಿಸುವಂತೆ ಬೆಳಗಾವಿ ಜಿಲ್ಲೆಯ ಜನತೆಯಲ್ಲಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಮನವಿ ಮಾಡಿದ್ದಾರೆ.

ABOUT THE AUTHOR

...view details