ಬೆಳಗಾವಿ :ಜಿಲ್ಲಾ ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ (41) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಳಗಾವಿಯ ಆಝಂನಗರದ ಮನೆಯಲ್ಲಿ ಹೃದಯಾಘಾತದಿಂದ ರಾಜು ಚಿಕ್ಕನಗೌಡರ ಕೊನೆಯುಸಿರೆಳೆದಿದ್ದಾರೆ.
ಎಬಿವಿಪಿ, ಆರ್ಎಸ್ಎಸ್ ಹಿನ್ನೆಲೆ ಹೊಂದಿದ್ದ ರಾಜು ಚಿಕ್ಕನಗೌಡರ ಅವರು ಇತ್ತೀಚಿಗೆ ಬಿಜೆಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ದಿ. ಸುರೇಶ ಅಂಗಡಿ ಅವರ ಆಪ್ತರಾಗಿದ್ದ ರಾಜು ಚಿಕ್ಕನಗೌಡರ ಬಿಜೆಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.