ಅಥಣಿ: ಕೂಲಿ ಕೆಲಸಕ್ಕೆ ಹೋದ ಸಮಯದಲ್ಲಿ ಟ್ರ್ಯಾಕ್ಟರ್ ಗಾಲಿಗೆ ಕಾಲು ಸಿಲುಕಿ ಎಡಗಾಲಿನ ಸ್ವಾಧೀನ ಕಳೆದುಕೊಂಡ ವಿಕಲಚೇತನ ಯುವಕ ಸ್ವಾವಲಂಬಿ ಜೀವನದ ಕನಸು ಇಟ್ಕೊಂಡು ಜೀವನ ಸಾಗಿಸುತ್ತಿದ್ದಾನೆ.
ಕಾಲು ಸ್ವಾಧೀನ ಇಲ್ಲದಿದ್ದರೂ ಕುಂದದ ಜೀವನೋತ್ಸಾಹ: ಈ ವಿಕಲಚೇತನನಿಗೆ ಬೇಕಿದೆ ನೆರವು - ಕಾಲು ಸ್ವಾಧೀನ ಇಲ್ಲದಿದ್ದರೂ ಕುಂದದ ಜೀವನೋತ್ಸಾಹ
ಅಪಘಾತದಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡ ಬೆಳಗಾವಿಯ ವಿಕಲ ಚೇತನ ಯುವಕನೊಬ್ಬ ಜೀವನ ನಡೆಸಲು ಸಹಕರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ ಸಂಕೋನಟ್ಟಿ ಗ್ರಾಮದ ನಿವಾಸಿ ಮಾರುತಿ ಶಿಂಗೆ ಈ ಸಮಸ್ಯೆಗೆ ಸಿಲುಕಿರುವ ಯುವಕ. ಮೂರು ವರ್ಷದವನಿದ್ದಾಗ ತಂದೆ-ತಾಯಿ ಕಳೆದುಕೊಂಡ ಈತ, ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದಿದ್ದಾನೆ. ಕಾಲು ಸ್ವಾಧೀನ ಕಳೆದುಕೊಂಡ ಬಳಿಕ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾನೆ. ಈತನ ಚಿಕ್ಕಮ್ಮ ಸಹ ಸಾಕಷ್ಟು ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇದರಿಂದ ತೀವ್ರವಾಗಿ ನೊಂದಿರುವ ಮಾರುತಿ ಶಿಂಗೆ, ಆತನ ಚಿಕ್ಕಮ್ಮನು ಸರ್ಕಾರ ಮತ್ತು ದಾನಿಗಳಿಗೆ ಸಹಾಯಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ದಾನಿಗಳು ಐಸಿಐಸಿಐ ಹಲ್ಯಾಳ ಬ್ರಾಂಚ್ ಐಎಫ್ಎಸ್ಸಿ ನಂಬರ್ ICICI0006505, ಅಕೌಂಟ್ ನಂಬರ್ 650501002732 ಈ ಖಾತೆಗೆ ಹಣ ವರ್ಗಾಯಿಸಬಹುದಾಗಿದೆ.