ಕರ್ನಾಟಕ

karnataka

ETV Bharat / state

ಇದೇ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಕುಂದಾನಗರಿ.. ಕಾಂಗ್ರೆಸ್, ಎಂಇಎಸ್ ಧೂಳೀಪಟ - ಪ್ರೀತಿ ಕಾಮಕರ್

ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಬೆಳಗಾವಿ ಪಾಲಿಕೆ ಫೈಟ್​​
ಬೆಳಗಾವಿ ಪಾಲಿಕೆ ಫೈಟ್​​

By

Published : Sep 6, 2021, 9:46 AM IST

Updated : Sep 6, 2021, 2:14 PM IST

ಬೆಳಗಾವಿ: ಕುಂದಾನಗರಿಯಲ್ಲಿ ನಾಡದ್ರೋಹಿ ಎಂಇಎಸ್‌ಗೆ ತೀವ್ರ ಮುಖಭಂಗವಾಗಿದೆ. 36 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿಯು ಮ್ಯಾಜಿಕ್ ನಂಬರ್ ತಲುಪಿದೆ. ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಪತ್ಯ ಸ್ಥಾಪಿಸಿದೆ. ಇನ್ನುಳಿದಂತೆ ಎಂಇಎಸ್ 2, ಕಾಂಗ್ರೆಸ್‌ 9, ಪಕ್ಷೇತರ 5, ಎಂಐಎಂ 1 ವಾರ್ಡ್​ಗಳಲ್ಲಿ ಜಯ ಸಾಧಿಸಿದೆ.

ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳ ವಿವರ

ವಾರ್ಡ್​ 21 - ಪ್ರೀತಿ ಕಾಮಕರ್‌

ವಾರ್ಡ್ ​51- ಶ್ರೀಶೈಲ ಕಾಂಬಳೆ

ವಾರ್ಡ್ ​58 - ಪ್ರಿಯಾ ದೀಪಕ್ ಸಾತಗೌಡ

ವಾರ್ಡ್​40- ರೇಷ್ಮಾ ಕಾಮಕರ

ವಾರ್ಡ್​ 45- ರೂಪಾ‌ ಸಂತೋಷ ಚಿಕ್ಕಲದಿನ್ನಿ

ವಾರ್ಡ್​ 46 - ಹನುಮಂತ ಕೊಂಗಾಳಿ

ವಾರ್ಡ್​ 22 - ರವಿರಾಜ್ ಸಾಂಬ್ರೇಕರ್

ವಾರ್ಡ್​ 42 - ಅಭಿಜಿತ್ ಜವಳಕರ್

ವಾರ್ಡ್​ 33- ರೇಷ್ಮಾ ಪಾಟೀಲ

ವಾರ್ಡ್​ 29 - ನಿತಿನ್ ಜಾಧವಗೆ

ವಾರ್ಡ್​ 57 -ಶೋಭಾ ಸೋಮನಾಚೆ

ವಾರ್ಡ್​ 39 - ಉದಯಕುಮಾರ್ ಉಪರಿ

ವಾರ್ಡ್​ 41 - ಮಂಗೇಶ ಪವಾರ

ವಾರ್ಡ್​ 49 - ದೀಪಾಲಿ ಸಂತೋಷ ಟೋಪಗಿ

ವಾರ್ಡ್​ 31- ವೀಣಾ ವಿಜಾಪೂರೆ

ವಾರ್ಡ್​ 24 -ಗಿರೀಶ ದೊಂಗಡಿ

ವಾರ್ಡ್​ 30- ಬ್ರಹ್ಮಾನಂದ ಮೀರಜಕರ್

ವಾರ್ಡ್​ 32 - ಸಂದೀಪ್ ಜೀರಿಗಿಹಾಳ

ವಾರ್ಡ್​ 36 -ರಾಜಶೇಖರ ಡೋಳಿ

ವಾರ್ಡ್​ 47- ಅಸ್ಮಿತಾ ಬೈರೇಗೌಡ ಪಾಟೀಲ್

ವಾರ್ಡ್​ 34 -ಶ್ರೇಯಸ್ ನಾಕೋಡಿ

ವಾರ್ಡ್​ 55- ಸವಿತಾ ಮರುಗೇಂದ್ರಗೌಡ ಪಾಟೀಲ

ವಾರ್ಡ್​ 33 -ರೇಷ್ಮಾ ಪಾಟೀಲ

ವಾರ್ಡ್​ 46 -ಹನುಮಂತ ಕೊಂಗಾಳಿ

ವಾರ್ಡ್​ 58 - ಪ್ರಿಯಾ ದೀಪಕ್ ಸಾತಗೌಡ

ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳ ವಿವರ

ವಾರ್ಡ್65 -ಶಮಿವುಲ್ಲಾ ಮಾಡೆವಾಲೆ

ವಾರ್ಡ್12- ಮೋದಿನಸಾಬ್ ಮತವಾಲೆ

ವಾರ್ಡ್2 -ಮುಜಮಿಲ್ ಡೋನಿ

ವಾರ್ಡ್53 - ಖುರ್ಷೀದ್ ಮುಲ್ಲಾ

ವಾರ್ಡ್32 - ಶಕೀಲಾ ಮುಲ್ಲಾ

ವಾರ್ಡ್37- ಶಾ ಮೊಮೀನ್ ಪಠಾಣ

ವಾರ್ಡ್8-ಮಹಮ್ಮದ್ ಸಂಗೊಳ್ಳಿ

ಗೆದ್ದ ಎಂಇಎಸ್​ ಅಭ್ಯರ್ಥಿಗಳ ವಿವರ

ವಾರ್ಡ್- 14 ರಲ್ಲಿ ಶಿವಾಜಿ ಮಂಡೋಲ್ಕರ್ (ಎಂಇಎಸ್)

ವಾರ್ಡ್-27 ಸಾಳುಂಕೆ (ಎಂಇಎಸ್)

ಪಕ್ಷೇತರ ಅಭ್ಯರ್ಥಿಗಳ ಗೆಲುವು

ವಾರ್ಡ್- 25 ಜರೀನಾ ಪತ್ತೆಖಾನ

ವಾರ್ಡ್- 19 ರಿಯಾಜ್ ಅಹ್ಮದ್ ಕಿಲ್ಲೆದಾರ್

ವಾರ್ಡ್ -9 ಅಭ್ಯರ್ಥಿ ಪೂಜಾ ಪಾಟೀಲ

ವಾರ್ಡ್ -38 ಮಹ್ಮಮದ್ ಅಜೀಮ್ ಪಟವೇಗರ

ಎಐಎಂಐಎಂ ತೆಕ್ಕೆಗೆ ಒಂದು ವಾರ್ಡ್

ವಾರ್ಡ್- 18ರಲ್ಲಿ ಶಾಹಿಖಾನ್ ಪಠಾಣ್

ಸಂಭ್ರಮಾಚರಣೆ ಮಾಡಿದ್ರೆ ಕ್ರಮ

ಗೆದ್ದ ಅಭ್ಯರ್ಥಿಗಳ ಪರವಾಗಿ ವಿಜಯೋತ್ಸವ, ಸಂಭ್ರಮಾಚರಣೆ ಮಾಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಮತ ಎಣಿಕೆ ಕೇಂದ್ರಗಳಿಗೂ ಭೇಟಿ ಕೊಟ್ಟು ಪರಿಶೀಲಿಸಿದ್ದೇನೆ. ಆದಷ್ಟು ಬೇಗ ಮತ ಎಣಿಕೆ ಪ್ರಕ್ರಿಯೆ ಮುಗಿಯಲಿದೆ‌ ಎಂದರು.

ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಹು-ಧಾ ಪಾಲಿಕೆಯಲ್ಲಿ ಬಿಜೆಪಿಗೆ ಮುನ್ನಡೆ, ಉಳಿದೆಡೆ ತೀವ್ರ ಹಣಾಹಣಿ

ಗೆದ್ದ ಅಭ್ಯರ್ಥಿಗಳ ಪರವಾಗಿ ಯಾರೂ ಸಂಭ್ರಮಾಚರಣೆ ಮಾಡುವಂತಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆ ತಡೆಗಟ್ಟಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಆದರೂ ಅಲ್ಲಲ್ಲಿ ನಿಯಮ ಮೀರಿ ವಿಜಯೋತ್ಸವ ಆಚರಣೆ ಮಾಡಲಾಗಿದೆ. ಕೆಲವೆಡೆ ಪೊಲೀಸರು ಲಾಠಿ ಚಾರ್ಜ್​ ಕೂಡಾ ಮಾಡಿದ್ದಾರೆ.

Last Updated : Sep 6, 2021, 2:14 PM IST

ABOUT THE AUTHOR

...view details