ಕರ್ನಾಟಕ

karnataka

ETV Bharat / state

ಕೃಷ್ಣಘಾಟಿ ಸೆಕ್ಟರ್​​ನಲ್ಲಿ ಉಗ್ರರೊಂದಿಗೆ ಸೆಣಸಾಡಿ ಹುತಾತ್ಮನಾದ ಬೆಳಗಾವಿ ಯೋಧ - Death in Belgaum-based soldier in war

ತಡರಾತ್ರಿ‌ ಉಗ್ರರ ಜತೆಗೆ ನಡೆದ ಗುಂಡಿನ ಕಾಳಗದಲ್ಲಿ ಸೆಣಸಾಡಿ ರಾಹುಲ್ ಹುತಾತ್ಮರಾಗಿದ್ದಾರೆ.

ರಾಹುಲ್ ಸುಳಗೇಕರ

By

Published : Nov 8, 2019, 1:41 PM IST


ಬೆಳಗಾವಿ: ಜಮ್ಮುಕಾಶ್ಮೀರ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್ ಬಳಿ ಉಗ್ರರೊಂದಿಗೆ ಹೋರಾಡಿ ಜಿಲ್ಲೆಯ ಯೋಧ ಹುತಾತ್ಮರಾಗಿದ್ದಾರೆ.

ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ರಾಹುಲ್ ಸುಳಗೇಕರ (22) ವೀರಮರಣ ಹೊಂದಿದವರು. ತಡರಾತ್ರಿ‌ ಉಗ್ರರ ಜತೆಗೆ ನಡೆದ ಗುಂಡಿನ ಕಾಳಗದಲ್ಲಿ ಸೆಣಸಾಡಿ ರಾಹುಲ್ ಹುತಾತ್ಮರಾಗಿದ್ದಾರೆ.

ರಾಹುಲ್ ಸುಳಗೇಕರ

ರಾಹುಲ್ ನಾಲ್ಕು ವರ್ಷಗಳ ಹಿಂದೆಯೇ ಭಾರತೀಯ ಸೇನೆ ಸೇರಿದ್ದರು. ರಾಹುಲ್​ನ ಹಿರಿಯ ಸಹೋದರ ಮಯೂರ ಕೂಡ ಸೇನೆಯಲ್ಲಿದ್ದಾರೆ. ರಾಹುಲ್‌ನ ತಂದೆ ಭೈರು ಕೂಡ ಮಾಜಿ ಸೈನಿಕರು ಎಂಬುವುದು ವಿಶೇಷ. ಹುತಾತ್ಮ ಯೋಧನ ಪಾರ್ಥೀವ ಶರೀರವನ್ನು ಶನಿವಾರ ಸಂಜೆ ನಗರಕ್ಕೆ ತರುವ ಸಾಧ್ಯತೆ ಇದೆ.

ABOUT THE AUTHOR

...view details