ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಎಂಇಎಸ್ ಪುಂಡರು ಉದ್ಧಟತನ ಮೆರೆಯುತ್ತಿದ್ದಾರೆ. ಮಹಾರಾಷ್ಟ್ರ ಏಕೀರಣ ಸಮಿತಿ (ಎಂಇಎಸ್) ಸದಸ್ಯರು ಪ್ರತಿಯೊಂದು ಮನೆ ಮುಂದೆ ಭಗವಾಧ್ವಜ ಏರಿಸಿ ಮತದಾನಕ್ಕೆ ತೆರಳಿದ್ದಾರೆ.
ಬೆಳಗಾವಿ: ಮನೆ ಮುಂದೆ ಭಗವಾಧ್ವಜ ಏರಿಸಿ MES ಪುಂಡರ ಕಿರಿಕ್ - ಭಗವಾಧ್ವಜ
ಬೆಳಗಾವಿ ಪಾಲಿಕೆ ಚುನಾವಣೆ ವೇಳೆ ಮನೆಗಳ ಮುಂದೆ ಭಗವಾಧ್ವಜ ನೆಟ್ಟು ಎಂಇಎಸ್ ಪುಂಡರು ಕಿರಿಕ್ ಮಾಡುತ್ತಿದ್ದಾರೆ.
![ಬೆಳಗಾವಿ: ಮನೆ ಮುಂದೆ ಭಗವಾಧ್ವಜ ಏರಿಸಿ MES ಪುಂಡರ ಕಿರಿಕ್ MES ಪುಂಡರ ಕಿರಿಕ್](https://etvbharatimages.akamaized.net/etvbharat/prod-images/768-512-12955143-thumbnail-3x2-dddd.jpg)
MES ಪುಂಡರ ಕಿರಿಕ್
ಬೆಳಗಾವಿಯ ಶಹಾಪುರದ ಕೊರೆಗಲ್ಲಿಯ ಮನೆಗಳ ಮುಂದೆ ಎಂಇಎಸ್ ಪುಂಡರು ಭಗವಾಧ್ವಜ ನೆಟ್ಟು, ವೋಟಿಂಗ್ ಮಾಡಲು ತೆರಳಿದ್ದಾರೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವ ಕಿಡಿಗೇಡಿಗಳು ಕಿರಿಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಬಿಜೆಪಿ ಮತ್ತೆ ಅಧಿಕಾರಕ್ಕೆ: ಮತದಾನ ಮಾಡಿದ ಶಾಸಕ ಅರವಿಂದ ಬೆಲ್ಲದ ವಿಶ್ವಾಸ