ಬೆಳಗಾವಿ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದ್ದ ಬೆಳಗಾವಿ ತಹಶೀಲ್ದಾರರು ಮಾಸ್ಕ್ ಧರಿಸದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪೊಲೀಸರು ದಂಡ ವಿಧಿಸಿದ್ದಾರೆ.
ಬೆಳಗಾವಿ: ಮಾಸ್ಕ್ ಧರಿಸದ ತಹಶೀಲ್ದಾರ್ಗೆ ದಂಡ ವಿಧಿಸಿದ ಪೊಲೀಸರು! - ತಹಶೀಲ್ದಾರ್ ಕುಲಕರ್ಣಿಗೆ ದಂಡ
ಮಾಸ್ಕ್ ಧರಿಸದಿದ್ದಕ್ಕೆ ಬೆಳಗಾವಿ ತಹಶೀಲ್ದಾರ್ ಆರ್.ಕೆ.ಕುಲಕರ್ಣಿಗೆ ಪೊಲೀಸರು 250 ರೂ. ದಂಡ ವಿಧಿಸಿದ್ದಾರೆ.
ತಹಶೀಲ್ದಾರರಿಗೆ ದಂಡ ವಿಧಿಸಿದ ಪೊಲೀಸ್
ನಗರದ ಚೆನ್ನಮ್ಮ ವೃತ್ತದಲ್ಲಿ ವಾಹನಗಳ ತಪಾಸಣೆ ವೇಳೆ ಮಾಸ್ಕ್ ಧರಿಸದೆ ಡಿಸಿ ಕಚೇರಿ ಕಡೆಯಿಂದ ಬರುತ್ತಿದ್ದ ತಹಶೀಲ್ದಾರ್ ಕುಲಕರ್ಣಿಗೆ ಮಾಧ್ಯಮದವರು ಮಾಸ್ಕ್ ಎಲ್ಲಿ ಎಂದು ಪ್ರಶ್ನಿಸಿದರು. ಕೂಡಲೇ ಎಚ್ಚೆತ್ತ ಅಧಿಕಾರಿ ಮಾಸ್ಕ್ ಹಾಕಿದ್ದೇನೆ ಎಂದು ಹೇಳುತ್ತಲೇ ಕಾರಿನಲ್ಲಿ ತೆರಳಿದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ರಮ ಕೈಗೊಂಡ ಪೊಲೀಸರು, ಆರ್.ಕೆ.ಕುಲಕರ್ಣಿಗೆ 250 ರೂ. ದಂಡ ವಿಧಿಸಿದ್ದಾರೆ.