ಬೆಳಗಾವಿ :ಕೊರೊನಾ ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಿಲ್ಲೆಯ ಜನತೆ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನದೇ ಗುಂಪು ಪುಂಪಾಗಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ.
ಯಾರ್ ಎಷ್ಟೇ ಹೇಳಿದ್ರೂ ಬೆಳಗಾವಿ ಜನರಿಗೆ ಲಾಕ್ಡೌನ್ ಕ್ಯಾರೇ ಇಲ್ಲ.. - belagavi lockdown
ಮಾಲಿನಿ ಸಿಟಿ ಮೈದಾನದಲ್ಲಿರುವ ವೊಲ್ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚುತ್ತಿದೆ. ಬೆಳಗಾವಿ ಜನತೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದೇ, ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ.
![ಯಾರ್ ಎಷ್ಟೇ ಹೇಳಿದ್ರೂ ಬೆಳಗಾವಿ ಜನರಿಗೆ ಲಾಕ್ಡೌನ್ ಕ್ಯಾರೇ ಇಲ್ಲ.. Belgaum people dont care to lockdown](https://etvbharatimages.akamaized.net/etvbharat/prod-images/768-512-6733826-thumbnail-3x2-blgm.jpg)
ನಗರದ ಹೊರವಲಯದ ಮಾಲಿನಿ ಸಿಟಿ ಮೈದಾನದಲ್ಲಿರುವ ವೋಲ್ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ಜನ ಸೇರಿದ್ದರು. ಭಯದಿಂದ ಬೆಚ್ಚಿದ ಪೊಲೀಸರು ಮಾರುಕಟ್ಟೆಯೊಳಗೆ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ. ಜನಸಂದಣಿ ತಡೆಯಲು 3 ತರಕಾರಿ ಮಾರುಕಟ್ಟೆ ಸ್ಥಾಪಿಸಿದರೂ ಸಹ ಪ್ರಯೋಜನವಿಲ್ಲದಂತಾಗಿದೆ. ಸಾಮಾಜಿಕ ಅಂತರವೂ ಇಲ್ಲದೇ, ಮಾಸ್ಕ್ ಕೂಡಾ ಧರಿಸಿದೆ ಯಾವುದೇ ಮುಂಜಾಗ್ರತಾ ಕ್ರಮವೂ ಕೈಗೊಳ್ಳದೆ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ.
ಕೊರೊನಾ ತಡೆಗೆ ಲಾಕ್ಡೌನ್ ಜಾರಿಯಲ್ಲಿದ್ರೂ ಇಲ್ಲಿನ ಜನ ಮಾತ್ರ ಸರಿಯಾಗಿ ಸ್ಪಂದಿಸ್ತಿಲ್ಲ. ಸರ್ಕಾರ ಇದನ್ನು ತಡೆಯಲು ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಿದೆ.