ಕರ್ನಾಟಕ

karnataka

ETV Bharat / state

ಸೊರಬ ದೇವಸ್ಥಾನ ರಸ್ತೆಯಲ್ಲಿರುವ ಮದ್ಯದ ಅಂಗಡಿ ಅಮಾನತು: ಸಚಿವ ಕೆ. ಗೋಪಾಲಯ್ಯ

ಈಗಾಗಲೇ ಅಂಗಡಿ ತೆರವಿಗೆ ನೋಟಿಸ್ ನೀಡಲಾಗಿದೆ.‌ ಈ ಮಧ್ಯೆ ಅಂಗಡಿ ಮಾಲೀಕ ರಾಜ್ಯ ಹೈ ಕೋರ್ಟಿಗೆ ಹೋಗಿದ್ದಾರೆ. ನ್ಯಾಯಾಲಯ 90 ದಿನದಲ್ಲಿ ಇದನ್ನು ತೀರ್ಮಾನಿಸಿ ಎಂದು ಕೆಎಟಿಗೆ ಸೂಚನೆ ನೀಡಿದೆ. ಶೀಘ್ರದಲ್ಲೇ ಈ ಪ್ರಕರಣವನ್ನು ಬಗೆಹರಿಸಲಾಗುವುದು. ಸದ್ಯಕ್ಕೆ ಮದ್ಯದ ಅಂಗಡಿಯನ್ನು ಅಮಾನತಿನಲ್ಲಿ ಇಡಲಾಗಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಅವರ ಪ್ರಶ್ನೆಗೆ ಸಚಿವ ಕೆ.ಗೋಪಾಲಯ್ಯ ಉತ್ತರಿಸಿದರು.

Belgaum Assembly
ಬೆಳಗಾವಿ ವಿಧಾನಸಭೆ

By

Published : Dec 20, 2022, 4:08 PM IST

ಬೆಳಗಾವಿ : ಮದ್ಯದ ಅಂಗಡಿಗೆ ಸಂಬಂಧಪಟ್ಟಂತೆ ಸೊರಬ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಮದ್ಯದ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ಬೇರೆ ಸ್ಥಳದಲ್ಲಿದ್ದ ಈ ಮದ್ಯದ ಅಂಗಡಿ ರಸ್ತೆ ಅಗಲೀಕರಣದ ಕಾರಣಕ್ಕೆ 2020 ರಲ್ಲಿ ಅನಿವಾರ್ಯವಾಗಿ ದೇವಸ್ಥಾನದ ರಸ್ತೆಗೆ ಸ್ಥಳಾಂತರಗೊಂಡಿತ್ತು. ಇಲ್ಲೂ ಕೂಡ ರಸ್ತೆ ಅಗಲೀಕರಣವಾಗಿದೆ.

ಈಗಾಗಲೇ ಅಂಗಡಿ ತೆರವಿಗೆ ನೋಟಿಸ್ ನೀಡಲಾಗಿದೆ.‌ ಈ ಮಧ್ಯೆ ಅಂಗಡಿ ಮಾಲೀಕ ರಾಜ್ಯ ಹೈ ಕೋರ್ಟಿಗೆ ಹೋಗಿದ್ದಾರೆ. ನ್ಯಾಯಾಲಯ 90 ದಿನದಲ್ಲಿ ಇದನ್ನು ತೀರ್ಮಾನಿಸಿ ಎಂದು ಕೆಎಟಿಗೆ ಸೂಚನೆ ನೀಡಿದೆ. ಶೀಘ್ರದಲ್ಲೇ ಈ ಪ್ರಕರಣವನ್ನು ಬಗೆಹರಿಸಲಾಗುವುದು. ಸದ್ಯಕ್ಕೆ ಮದ್ಯದ ಅಂಗಡಿಯನ್ನು ಅಮಾನತಿನಲ್ಲಿ ಇಡಲಾಗಿದೆ ಎಂದು ಉತ್ತರಿಸಿದರು.

ಮುಂದುವರೆದು, ಶಾಸಕ ಕುಮಾರ್ ಬಂಗಾರಪ್ಪರವರು ರಂಗನಾಥಸ್ವಾಮಿ ದೇವಸ್ಥಾನ, ದುರ್ಗಮ್ಮನ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ, ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನಗಳ ಮಧ್ಯ ಭಾಗದಲ್ಲಿ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ಮದ್ಯದ ಅಂಗಡಿ ತೆರೆಯಲು ಅವಕಾಶ ಕೊಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ, ಸದರಿ ಮದ್ಯದ ಅಂಗಡಿಯನ್ನು ತೆರವುಗೊಳಿಸಲು ಇದುವರೆಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಳಿದರು.

ಅಲ್ಲದೆ, ಕಾನೂನಿಗೆ ವಿರುದ್ಧವಾಗಿ ಮದ್ಯದ ಅಂಗಡಿಯನ್ನು ತೆರೆಯಲು ಅವಕಾಶ ಕೊಟ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ಇದುವರೆಗೆ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂದು ಸದನದಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ:ಅಲ್ಪಸಂಖ್ಯಾತರ ವಿವಿಧ ಯೋಜನೆಗಳಿಗೆ ಹಣ ಮಂಜೂರು ಮಾಡುತ್ತೇವೆ: ಸಿಎಂ ಭರವಸೆ

ABOUT THE AUTHOR

...view details