ಬೆಳಗಾವಿ:ವೀರಶೈವರ ಹೆಸರಲ್ಲಿ ಮತಯಾಚನೆ ಮಾಡುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೋಕಾಕ್ ಜೆಎಂಎಫ್ಸಿ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
ನೀತಿ ಸಂಹಿತೆ ಉಲ್ಲಂಘನೆ ಆರೋಪ: ಸಿಎಂ ಬಿಎಸ್ವೈಗೆ ಸಮನ್ಸ್ ಜಾರಿ - ಗೋಕಾಕ ಜೆಎಂಎಫ್ಸಿ ನ್ಯಾಯಾಲಯ ಸಮನ್ಸ್ ಜಾರಿ
ಗೋಕಾಕ್ ಉಪಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಆಗಿದ್ದ ರಮೇಶ್ ಜಾರಕಿಹೊಳಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ವೀರಶೈವ ಮತಗಳು ಬೇರೆಡೆ ಚದುರಬಾರದು ಎಂದು ಬಹಿರಂಗ ಸಮಾವೇಶದಲ್ಲಿ ಮತಯಾಚಿಸಿದ್ದರು.
ಸೆಪ್ಟೆಂಬರ್ 1 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿಎಂಗೆ ಸಮನ್ಸ್ ನೀಡಲಾಗಿದೆ. ಗೋಕಾಕ್ ಕ್ಷೇತ್ರಕ್ಕೆ ಉಪಚುನಾವಣೆ ವೇಳೆ, ಬಿಜೆಪಿ ಅಭ್ಯರ್ಥಿ ಆಗಿದ್ದ ರಮೇಶ್ ಜಾರಕಿಹೊಳಿ ಪರ ಪ್ರಚಾರಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ವೀರಶೈವ ಮತಗಳು ಆ ಕಡೆ, ಈ ಕಡೆ ಆಗಬಾರದು ಎಂದು ಬಹಿರಂಗ ಸಮಾವೇಶದಲ್ಲಿ ಮತಯಾಚಿಸಿದ್ದರು.
ಜಾತಿ ಹೆಸರಲ್ಲಿ ಮತಯಾಚನೆ ಮಾಡಿದ ಆರೋಪದಡಿ ಸಿಎಂ ವಿರುದ್ಧ ಚುನಾವಣೆ ಅಧಿಕಾರಿಗಳು ಗೋಕಾಕ್ ನಗರ ಠಾಣೆಯಲ್ಲಿ ನವೆಂಬರ್ 26 ರಂದು ದೂರು ದಾಖಲಿಸಿದ್ದರು. ಪ್ರಕರಣದ ಕುರಿತು ಗೋಕಾಕ್ ನಗರ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ನ್ಯಾಯಾಲಯ ತಿರಸ್ಕರಿಸಿದೆ. ಅಲ್ಲದೇ ಸೆಪ್ಟೆಂಬರ್ 1 ರಂದು ಕೋರ್ಟ್ಗೆ ಹಾಜರಾಗುವಂತೆ ನ್ಯಾಯಾಲಯ ಸಿಎಂ ಬಿಎಸ್ವೈಗೆ ಸಮನ್ಸ್ ಜಾರಿಗೊಳಿಸಿದೆ.