ಬೆಳಗಾವಿ:ಪಶ್ಚಿಮ ಘಟ್ಟ ಪ್ರದೇಶದ ಸುತ್ತಮುತ್ತಲು ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಬೆಳಗಾವಿ: ಧಾರಾಕಾರ ಮಳೆಗೆ ಖಾನಾಪುರ ತಾಲೂಕಿನ ಹಲವು ಗ್ರಾಮಗಳ ಸಂಪರ್ಕ ಕಡಿತ! - ಬೆಳಗಾವಿ ಮಳೆ ಅಪ್ಡೇಟ್ ನ್ಯೂಸ್
ಪಶ್ಚಿಮ ಘಟ್ಟ ಪ್ರದೇಶದ ಸುತ್ತಮುತ್ತಲು ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕಳೆದೊಂದು ವಾರದಿಂದ ಬೆಳಗಾವಿ ನಗರವೂ ಸೇರಿದಂತೆ ಖಾನಾಪುರ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಕೂಡ ಅಸ್ತವ್ಯಸ್ತವಾಗಿದೆ.
ಬೆಳಗಾವಿ: ಧಾರಾಕಾರ ಮಳೆಗೆ ಖಾನಾಪುರ ತಾಲೂಕಿನ ಹಲವು ಗ್ರಾಮಗಳ ಸಂಪರ್ಕ ಕಡಿತ!
ಖಾನಾಪುರ ತಾಲೂಕಿನ ಕಣಕುಂಬಿ, ನಾಗರಗಾಳಿ, ಗೊಲ್ಲಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗ್ತಿದೆ. ಇದರಿಂದ ಅಮಗಾಂವ ಗ್ರಾಮದ ಸುತ್ತಮುತ್ತಲಿನ ಗದ್ದೆಗಳೆಲ್ಲವೂ ಜಲಾವೃತವಾಗಿವೆ. ಅಮಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ, ರಸ್ತೆಗಳೆಲ್ಲವೂ ಜಲಾವೃತಗೊಂಡಿದ್ದು, ಗ್ರಾಮಗಳ ಸಂಪರ್ಕ ಸಾಧ್ಯವಾಗುತ್ತಿಲ್ಲ.
ಕಳೆದೊಂದು ವಾರದಿಂದ ಬೆಳಗಾವಿ ನಗರವೂ ಸೇರಿದಂತೆ ಖಾನಾಪುರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಕೂಡ ಅಸ್ತವ್ಯಸ್ತಗೊಂಡಿದೆ.