ಬೆಳಗಾವಿ: ಕುಂದಾನಗರಿ ಬೆಳಗಾವಿ ಸ್ಮಶಾನಗಳು ಮತ್ತೊಮ್ಮೆ ಕೊರೊನಾ ಭೀಕರತೆಗೆ ಸಾಕ್ಷಿಯಾಗ್ತಿದ್ದು, ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯ ಖಬರಸ್ತಾನ್‌ನಲ್ಲಿ ಕೋವಿಡ್ ಶವಗಳನ್ನು ಹೂಳಲು 20ಕ್ಕೂ ಹೆಚ್ಚು ಗುಂಡಿಗಳನ್ನು ತೋಡಲಾಗಿದೆ.
ಕೊರೊನಾ ಭೀಕರತೆಗೆ ಸಾಕ್ಷಿಯಾಗ್ತಿದೆ ಬೆಳಗಾವಿ - ಬೆಳಗಾವಿ ಕೊರೊನಾ ಸಾವು
ನಗರದ ಡಿಸಿ ಕಚೇರಿ ಎದುರಿಗಿರುವ ಅಂಜುಮನ್ ಸಂಸ್ಥೆಯ ಹಿಂಬದಿಯ ಸ್ಮಶಾನದಲ್ಲಿ 20ಕ್ಕೂ ಹೆಚ್ಚು ಗುಂಡಿಗಳನ್ನು ತೋಡಿದ್ದು, ಮೃತದೇಹಗಳನ್ನು ಹೂಳಲು ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ.
ನಗರದ ಡಿಸಿ ಕಚೇರಿ ಎದುರಿಗಿರುವ ಅಂಜುಮನ್ ಸಂಸ್ಥೆಯ ಹಿಂಬದಿಯ ಸ್ಮಶಾನದಲ್ಲಿ 20ಕ್ಕೂ ಹೆಚ್ಚು ಗುಂಡಿಗಳನ್ನು ತೋಡಿದ್ದು, ಮೃತದೇಹಗಳನ್ನು ಹೂಳಲು ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ. ಅಂಜುಮನ್ ಸಂಸ್ಥೆಯ ಸಿಬ್ಬಂದಿ ಹೇಳುವಂತೆ, ಕೋವಿಡ್‌ನಿಂದ ನಾಲ್ವರು, ಅನ್ಯ ಕಾರಣಗಳಿಂದ ಮೃತಪಟ್ಟ ನಾಲ್ವರು ಸೇರಿ ಒಟ್ಟು ಏಂಟು ಮೃತದೇಹಗಳ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇನ್ನೂ ಐದು ಮೃತದೇಹಗಳು ಬರಲಿವೆ ಎಂದು ಮಾಹಿತಿ ನೀಡಿದರು.
ಇದಲ್ಲದೇ ಸದ್ಯದ ಸ್ಥಿತಿಯಲ್ಲಿ ನಾವು ಯಾವುದೇ ರೀತಿಯ ಜಾತಿ ಧರ್ಮಗಳನ್ನು ನೋಡದೇ ಮಾನವೀಯತೆ ದೃಷ್ಟಿಯಿಂದ ಯಾವುದೇ ಸಮುದಾಯದ ಜನರು ಕೋವಿಡ್ ನಿಂದ ಸಾವನ್ನಪ್ಪಿದರೆ, ಅಂತರವನ್ನು ಅವರ ಸಮುದಾಯಗಳ ವಿಧಿವಿಧಾನಗಳಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಹೀಗಾಗಿ ಯಾರಾದರೂ ಏನಾದರೂ ತೊಂದರೆಗೆ ಸಿಲುಕಿದರೆ ಅಂತವರ ನೇರವಾಗಿ ಅಂಜುಮನ್ ಸಂಸ್ಥೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.