ಬೆಳಗಾವಿ: 7 ಜನರಿಗೆ ಕೊರೊನಾ ಸೋಂಕು ತಗಲಿರುವುದರಿಂದ ಗಡಿ ಜಿಲ್ಲೆ ತಲ್ಲಣಗೊಂಡಿದೆ. ಹಾಗೆಯೇ ಜಿಲ್ಲಾಡಳಿತ 33 ಜನರ ವರದಿಯ ನಿರೀಕ್ಷೆಯಲ್ಲಿದೆ.
ತಲ್ಲಣ ಮೂಡಿಸಿದ ಕೊರೊನಾ: 33 ಜನರ ವರದಿ ನಿರೀಕ್ಷೆಯಲ್ಲಿ ಬೆಳಗಾವಿ ಜಿಲ್ಲಾಡಳಿತ - ಬೆಳಗಾವಿ 26 ಶಂಕಿತರ ಮಾದರಿ ರವಾನೆ
ಬೆಳಗಾವಿ ಜಿಲ್ಲೆಯಿಂದ ಇಂದು ಮತ್ತೆ ಹೊಸದಾಗಿ 26 ಶಂಕಿತರ ಗಂಟಲಿನ ದ್ರವದ ಮಾದರಿಯನ್ನು ರವಾನೆ ಮಾಡಲಾಗಿದ್ದು, ಒಟ್ಟು 33 ಜನರ ವರದಿ ಬರಬೇಕಿದೆ.
ಜಿಲ್ಲೆಯಿಂದ ಇಂದು ಮತ್ತೆ ಹೊಸದಾಗಿ 26 ಶಂಕಿತರ ಮಾದರಿ ರವಾನೆ ಮಾಡಲಾಗಿದ್ದು, ಒಟ್ಟು 33 ಜನರ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಈವರೆಗೂ 1044 ಜನರ ಮೇಲೆ ನಿಗಾ ಇಡಲಾಗಿದ್ದು, 386 ಜನರಿಗೆ 14 ದಿನಗಳ ಹೋಮ್ ಕ್ವಾರಂಟೈನಲ್ಲಿಡಲಾಗಿದೆ. ಒಟ್ಟು 19 ಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಐಸೊಲೇಷನಲ್ಲಿದ್ದಾರೆ. ಒಟ್ಟು 424 ಜನರಿಗೆ 14 ದಿನಗಳ ಹೋಮ್ ಐಸೊಲೇಷನ್ ಮುಗಿದಿದ್ದು, ಒಟ್ಟು 215 ಜನರಿಗೆ 28 ದಿನಗಳ ಹೋಮ್ ಐಸೊಲೇಷನ್ ನಲ್ಲಿದ್ದಾರೆ.
ಇನ್ನು ಜಿಲ್ಲೆಯಿಂದ ಈವರೆಗೂ 109 ಜನರ ಮಾದರಿ ಪ್ರಯೋಗಾಲಯಕ್ಕೆ ರವಾನೆ ಆಗಿದ್ದು ಅದರಲ್ಲಿ ಏಳು ಜನರಿಗೆ ಕೊರೊನಾ ಪಾಸಿಟಿವ್, 69 ಜನರಿಗೆ ನೆಗೆಟಿವ್ ಬಂದಿದೆ ಎಂದು ಬೆಳಗಾವಿ ಜಿಲ್ಲಾಡಳಿತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.