ಬೆಳಗಾವಿ: ಜಿಲ್ಲಾಡಳಿತದಿಂದ ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್ ಅನ್ವಯ ಈವರೆಗೆ ಜಿಲ್ಲೆಯಲ್ಲಿ ಒಟ್ಟು 14 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬೆಳಗಾವಿಯಲ್ಲಿ ಈವರೆಗೆ 14 ಜನರಿಗೆ ಕೊರೊನಾ ಸೋಂಕು ದೃಢ: ಜಿಲ್ಲಾಡಳಿತ ಸ್ಪಷ್ಟನೆ - ಬೆಳಗಾವಿಯಲ್ಲಿ 14 ಜನರಿಗೆ ಕೊರೊನಾ ಸೋಂಕು ದೃಢ
ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 1636 ಜನರ ಮೇಲೆ ನಿಗಾ ಇರಿಸಲಾಗಿದೆ. ಈ ಪೈಕಿ 272 ಜನರು 14 ದಿನಗಳ ಹೋಮ್ ಕ್ವಾರಂಟೈನ್ನಲ್ಲಿದ್ದು, 15 ಜನರು ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ.
![ಬೆಳಗಾವಿಯಲ್ಲಿ ಈವರೆಗೆ 14 ಜನರಿಗೆ ಕೊರೊನಾ ಸೋಂಕು ದೃಢ: ಜಿಲ್ಲಾಡಳಿತ ಸ್ಪಷ್ಟನೆ Belgaum district awaits report of 77 people](https://etvbharatimages.akamaized.net/etvbharat/prod-images/768-512-6767604-605-6767604-1586704531684.jpg)
ಸೋಂಕಿತರ ಸಂಪರ್ಕ ಹೊಂದಿದ 77 ಜನರ ರಕ್ತ ಹಾಗೂ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಜಿಲ್ಲಾಡಳಿತ ಈ ಎಲ್ಲರ ವರದಿಯ ನಿರೀಕ್ಷೆಯಲ್ಲಿದೆ. ಜಿಲ್ಲೆಯಲ್ಲಿ ಈವರೆಗೂ 1,636 ಜನರ ಮೇಲೆ ನಿಗಾ ಇರಿಸಲಾಗಿದ್ದು, ಈವರೆಗೆ 272 ಜನರನ್ನು 14 ದಿನಗಳ ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಒಟ್ಟು 15 ಜನರು ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ.
ಒಟ್ಟು 640 ಜನರಿಗೆ 14 ದಿನಗಳ ಹೋಮ್ ಕ್ವಾರಂಟೈನ್ ಹಾಗೂ 709 ಜನರಿಗೆ 28 ದಿನಗಳ ಹೋಮ್ ಐಸೋಲೇಷನ್ ಮುಕ್ತಾಯಗೊಂಡಿದೆ. ಜಿಲ್ಲೆಯಿಂದ ಈವರೆಗೆ 335 ಜನರ ಮಾದರಿ ಪ್ರಯೋಗಾಲಯಕ್ಕೆ ರವಾನೆಯಾಗಿದ್ದು, 14 ಪಾಸಿಟಿವ್ ಹಾಗೂ 244 ಜನರ ವರದಿ ನೆಗೆಟಿವ್ ಬಂದಿದೆ.