ಬೆಳಗಾವಿ: ದೆಹಲಿ ಧರ್ಮಸಭೆಯಲ್ಲಿ ಪಾಲ್ಗೊಂಡು ಬೆಳಗಾವಿಗೆ ಆಗಮಿಸಿದ್ದ ಎಲ್ಲ ತಬ್ಲಿಘಿಗಳನ್ನು ಪತ್ತೆ ಹಚ್ಚಿ ಕೊರೊನಾ ಸೋಂಕು ಹರಡದಂತೆ ಕ್ರಮ ವಹಿಸಿದ್ದ ಬೆಳಗಾವಿ ಜಿಲ್ಲಾಡಳಿತ ಇದೀಗ ಅಜ್ಮೀರ ಯಾತ್ರಾರ್ಥಿಗಳ ಹುಡುಕಾಟದಲ್ಲಿ ತೊಡಗಿದೆ.
ಅಜ್ಮೀರದಿಂದ ಮರಳಿದ ಯಾತ್ರಾರ್ಥಿಗಳಿಗಾಗಿ ಬೆಳಗಾವಿಯಲ್ಲಿ ತೀವ್ರ ತಲಾಶ್ - ಅಜ್ಮೀರದಿಂದ ಮರಳಿದ ಯಾತ್ರಾರ್ಥಿಗಳ ಸುದ್ದಿ
ಜಿಲ್ಲೆಯ 7 ಕುಟುಂಬಗಳ 35 ಜನರ ಪೈಕಿ 22 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಲಾಕ್ ಡೌನ್ ಮುಂಚೆ ಯಾರಾದರೂ ಅಜ್ಮೀರ ಪ್ರವಾಸ ಕೈಗೊಂಡು ಜಿಲ್ಲೆಗೆ ಮರಳಿದ್ದಾರಾ ಎಂಬ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ.
ಜಿಲ್ಲೆಯ 7 ಕುಟುಂಬಗಳ 35 ಜನರ ಪೈಕಿ 22 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಲಾಕ್ಡೌನ್ ಮುಂಚೆ ಯಾರಾದರೂ ಅಜ್ಮೀರ ಪ್ರವಾಸ ಕೈಗೊಂಡು ಜಿಲ್ಲೆಗೆ ಮರಳಿದ್ದಾರಾ ಎಂಬ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ. ಅಜ್ಮೀರ್‌ನಿಂದ ವಾಪಸ್ ಆದವರು ಸ್ವಯಂಪ್ರೇರಿತರಾಗಿ ತಪಾಸಣೆಗೆ ಒಳಗಾಗುವಂತೆ ಜಿಲ್ಲಾಡಳಿತ ಮನವಿ ಮಾಡುತ್ತಿದೆ.
ರಾಜ್ಯ ಪ್ರವೇಶಿಸುವ ಬೆಳಗಾವಿ ಜಿಲ್ಲೆಯ ಕೊಗನೊಳ್ಳಿ ಟೋಲ್ ಗೇಟ್ ಬಳಿಯೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರತಿ ವಾಹನವನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನವೇ ದೆಹಲಿಯ ಧರ್ಮಸಭೆಯಲ್ಲಿ ಪಾಲ್ಗೊಂಡು ಬಂದಿದ್ದ ತಬ್ಲಿಘಿಗಳನ್ನು ಜಿಲ್ಲಾಡಳಿತ ಪತ್ತೆ ಹಚ್ಚಿತ್ತು. ತಬ್ಲಿಘಿ ಬಳಿಕ ಬೆಳಗಾವಿಯಲ್ಲಿ ಅಜ್ಮೀರ ಯಾತ್ರಾರ್ಥಿಗಳು ಆತಂಕ ಸೃಷ್ಟಿಸಿದ್ದಾರೆ. ಹೀಗಾಗಿ ಅಜ್ಮೀರ ಯಾತ್ರಾರ್ಥಿಗಳಿಗೆ ಜಿಲ್ಲಾಡಳಿತ ಹುಡುಕಾಟ ನಡೆಸಿದೆ.