ಕರ್ನಾಟಕ

karnataka

By

Published : Jan 27, 2020, 2:36 PM IST

ETV Bharat / state

ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ

2014ರಲ್ಲಿ ನಡೆದಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣಾ ಅವಧಿ 2019 ಮಾರ್ಚ್ 9ಕ್ಕೆ ಮುಕ್ತಾಯಗೊಂಡಿದ್ದರೂ ಇನ್ನೂ ಚುನಾವಣಾ ಆಯೋಗ ಚುನಾವಣೆ ನಡೆಸಿಲ್ಲ. ಹಾಗಾಗಿ ಬೇಗ ಚುನಾವಣೆ ನಡೆಸುವಂತೆ ಆಗ್ರಹಿಸಿ ಪಾಲಿಕೆಯ ಮಾಜಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

Belgaum city council Former members
ಬೆಳಗಾವಿ ಮಹಾನಗರ ಪಾಲಿಕೆ ಮಾಜಿ ಸದಸ್ಯರು

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವಂತೆ ಆಗ್ರಹಿಸಿ ಪಾಲಿಕೆಯ ಮಾಜಿ ಸದಸ್ಯರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬೆಳಗಾವಿ ಮಹಾನಗರ ಪಾಲಿಕೆ ಮಾಜಿ ಸದಸ್ಯರು

ನಗರದ ಜಿಲ್ಲಾಧಿಕಾರಿ ಕಚೇರಿ‌ ಎದುರು ಪ್ರತಿಭಟನೆ ನಡೆಸಿದ ಮಾಜಿ ಸದಸ್ಯರು, ನಂತರ ಜಿಲ್ಲಾಧಿಕಾರಿಗಳ ಮೂಲಕ ‌ಚುನಾವಣಾ ಆಯೋಗ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.

2014ರಲ್ಲಿ ಚುನಾವಣೆ ನಡೆದಿದ್ದ ಪಾಲಿಕೆಯ ಐದು ವರ್ಷದ ಅವಧಿ 2019 ಮಾರ್ಚ್ 9ಕ್ಕೆ ಮುಗಿದಿದೆ. ಕೆಎಂಸಿ ಕಾಯ್ದೆ ಅನ್ವಯ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕಿತ್ತು. ಕಾರಣಾಂತರಗಳಿಂದ ಚುನಾವಣೆ ನಡೆಸಿಲ್ಲವಾದ್ದರಿಂದ ಕಳೆದ 10 ತಿಂಗಳಿಂದ ಪಾಲಿಕೆಗೆ ಸದಸ್ಯರಿಲ್ಲ. ಹೀಗಾಗಿ ಮೂಲ ಸೌಕರ್ಯ ಸೇರಿದಂತೆ ನಗರವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಾಕಷ್ಟು ‌ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ. ಹೀಗಾಗಿ ಆದಷ್ಟು ಬೇಗ ಕಾನೂನು ತೊಡಕು ನಿವಾರಿಸಿ ತಕ್ಷಣವೇ ಚುನಾವಣೆ ‌ನಡೆಸಲು ಕ್ರಮ ವಹಿಸುವಂತೆ ‌ಮನವಿ ಮಾಡಿಕೊಂಡರು.

ABOUT THE AUTHOR

...view details