ಕರ್ನಾಟಕ

karnataka

ETV Bharat / state

ಜು.27 ರಿಂದ ಬೆಳಗಾವಿ ಎಪಿಎಂಸಿ ವಹಿವಾಟು ಬಂದ್ - ಎಪಿಎಂಸಿ ಸೆಸ್

ಕೇಂದ್ರ ಸರ್ಕಾರ ಎಪಿಎಂಸಿ ಸೆಸ್ ರದ್ದು ಮಾಡಿದೆ. ಅದರಂತೆ ರಾಜ್ಯದಲ್ಲಿಯೂ ಎಪಿಎಂಸಿ ಕಾಯ್ದೆ ಯಥಾವತ್ತಾಗಿ ಜಾರಿಗೆಯಾಗಬೇಕು. ಆದರೆ ರಾಜ್ಯ ಸರ್ಕಾರ ಎಪಿಎಂಸಿ ಸೆಸ್ ತೆಗೆದುಕೊಳ್ಳುತ್ತಿದೆ. ಎಪಿಎಂಸಿ ಆವರಣದೊಳಗೆ ನಡೆಯುವ ವಹಿವಾಟಿಗೆ ಯಾವುದೇ ಸೆಸ್ ವಿಧಿಸಬಾರದು ಎಂದು ವರ್ತಕರು ಆಗ್ರಹಿಸಿದರು.

Belgaum APMC Transaction Band ಬೆಳಗಾವಿ ಎಪಿಎಂಸಿ ವಹಿವಾಟು ಬಂದ್
ಎಪಿಎಂಸಿ ಸೆಸ್ ಕೈಬಿಡುವಂತೆ ಆಗ್ರಹ

By

Published : Jul 24, 2020, 7:46 PM IST

ಬೆಳಗಾವಿ: ರಾಜ್ಯ ಸರ್ಕಾರ ವಿಧಿಸಿರುವ ಎಪಿಎಂಸಿ ಸೆಸ್ ಕೈಬಿಡುವಂತೆ ಆಗ್ರಹಿಸಿ ಜು.27ರಿಂದ ಅನಿರ್ದಿಷ್ಟಾವಧಿಯವರೆಗೆ ಬೆಳಗಾವಿ ಎಪಿಎಂಸಿ ವಹಿವಾಟು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಆಹಾರ ವರ್ತಕರ ಸಂಘದಿಂದ ಇಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗೆ ಪತ್ರ ಸಲ್ಲಿಸಲಾಯಿತು.

ಎಪಿಎಂಸಿ ಸೆಸ್ ಕೈಬಿಡುವಂತೆ ಆಗ್ರಹ

ಮನವಿಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಂಘದ ಪದಾಧಿಕಾರಿಗಳು, ಕೇಂದ್ರ ಸರ್ಕಾರ ಎಪಿಎಂಸಿ ಸೆಸ್ ತೆಗೆದು ಹಾಕಿದೆ. ಅದರಂತೆ ರಾಜ್ಯದಲ್ಲಿಯೂ ಎಪಿಎಂಸಿ ಕಾಯ್ದೆ ಯಥಾವತ್ತಾಗಿ ಜಾರಿಗೆಯಾಗಬೇಕು. ಆದರೆ ರಾಜ್ಯ ಸರ್ಕಾರ ಎಪಿಎಂಸಿ ಸೆಸ್ ತೆಗೆದುಕೊಳ್ಳುತ್ತಿದ್ದು, ಎಪಿಎಂಸಿ ಆವರಣದೊಳಗೆ ನಡೆಯುವ ವಹಿವಾಟಿಗೆ ಯಾವುದೇ ಸೆಸ್ ವಿಧಿಸಬಾರದು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಎಪಿಎಂಸಿ ಆವರಣದೊಳಗೆ ಇರುವವರಿಗೆ ಮಾತ್ರ ಸೆಸ್ ಪಡೆದುಕೊಳ್ಳುತ್ತಿದ್ದು, ಹೊರಗಿನ ವ್ಯಾಪಾರಿಗಳಿಗೆ ಯಾವುದೇ ರೀತಿಯ ಸೆಸ್ ಪಡೆಯುತ್ತಿಲ್ಲ. ಇದರಿಂದಾಗಿ ಎಪಿಎಂಸಿ ಆವರಣದಲ್ಲಿ ವ್ಯಾಪಾರ ವಹಿವಾಟು ನಡೆಸಲು ತೊಂದರೆ ಆಗುತ್ತಿದೆ.

ಹೀಗಾಘಿ ಆಹಾರ ಧಾನ್ಯ ವರ್ತಕರ ಸಂಘ, ಉಳ್ಳಾಗಡ್ಡಿ, ಆಲೂಗಡ್ಡೆ ವರ್ತಕರ‌ ಸಂಘದಿಂದ ಜು.27ರಿಂದ ಎಪಿಎಂಸಿ ‌ಮಾರುಕಟ್ಟೆಯಲ್ಲಿ ಅನಿರ್ದಿಷ್ಟ ಅವಧಿಯವರೆಗೆ ವ್ಯಾಪಾರ ವಹಿವಾಟು ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details