ಬೆಳಗಾವಿ:ಕೊರೊನಾ ಸೋಂಕಿತರನ್ನು ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ಗೆ ಕರೆತರುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿಯಾದ ಘಟನೆ ತಾಲೂಕಿನ ಹೊನಗಾ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಬೆಳಗಾವಿ: ಸೋಂಕಿತರನ್ನು ಕರೆತರುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿ - ಆ್ಯಂಬುಲೆನ್ಸ್ ಪಲ್ಟಿ
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಿಂದ ಬೆಳಗಾವಿಯ ಬಿಮ್ಸ್ ಗೆ ಬರುತ್ತಿದ್ದ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ.
![ಬೆಳಗಾವಿ: ಸೋಂಕಿತರನ್ನು ಕರೆತರುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿ Belgaum, an ambulance Accident carrying the infected](https://etvbharatimages.akamaized.net/etvbharat/prod-images/768-512-8355636-18-8355636-1596972167447.jpg)
ಸೋಂಕಿತರನ್ನು ಕರೆತರುತ್ತಿದ್ದ ಆಂಬುಲೆನ್ಸ್ ಪಲ್ಟಿ, ಬೆಳಗಾವಿ ಹೊರವಲಯದಲ್ಲಿ ಘಟನೆ
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಿಂದ ಬೆಳಗಾವಿಯ ಬಿಮ್ಸ್ ಗೆ ಆ್ಯಂಬುಲೆನ್ಸ್ ಬರುತ್ತಿತ್ತು. ಅಂಕಲಿ ಗ್ರಾಮದ ಇಬ್ಬರು ಕೊರೊನಾ ಸೋಂಕಿತರನ್ನು ಕರೆತರಲಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆ್ಯಂಬುಲೆನ್ಸ್ ಪಲ್ಟಿ ಆಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಕ್ಷಣವೇ ಬೇರೆ ಆ್ಯಂಬುಲೆನ್ಸ್‌ನಲ್ಲಿ ಕೊರೊನಾ ಸೋಂಕಿತರನ್ನ ಬಿಮ್ಸ್‌ಗೆ ರವಾನಿಸಲಾಗಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.