ಕರ್ನಾಟಕ

karnataka

ETV Bharat / state

ಪರಿಹಾರ ನೀಡಲು ವಿಳಂಬ: ಬೆಳಗಾವಿ ಎಸಿ ಕಚೇರಿ ಪೀಠೋಪಕರಣ ಜಪ್ತಿ - ಪರಿಹಾರ ವಿಳಂಬ ಹಿನ್ನೆಲೆ ಬೆಳಗಾವಿ ಎಸಿ ಕಚೇರಿ ಪೀಠೋಪಕರಣ ಜಪ್ತಿ,

ಪರಿಹಾರ ನೀಡಲು ವಿಳಂಬ ಧೋರಣೆಯಿಂದಾಗಿ ಬೆಳಗಾವಿ ಎಸಿ ಕಚೇರಿಯ ಪೀಠೋಪಕರಣ ಜಪ್ತಿ ಮಾಡಲಾಗಿದೆ.

Belgaum AC Office Furniture seized, Belgaum AC Office Furniture seized for relief delay, Belgaum AC Office Furniture seized for  relief delay news,  ಬೆಳಗಾವಿ ಎಸಿ ಕಚೇರಿ ಪೀಠೋಪಕರಣ ಜಪ್ತಿ, ಪರಿಹಾರ ವಿಳಂಬ ಹಿನ್ನೆಲೆ  ಬೆಳಗಾವಿ ಎಸಿ ಕಚೇರಿ ಪೀಠೋಪಕರಣ ಜಪ್ತಿ,  ಬೆಳಗಾವಿ ಎಸಿ ಕಚೇರಿ ಪೀಠೋಪಕರಣ ಜಪ್ತಿ ಸುದ್ದಿ,
ಬೆಳಗಾವಿ ಎಸಿ ಕಚೇರಿ ಪೀಠೋಪಕರಣ ಜಪ್ತಿ ಬಗ್ಗೆ ಮಾಹಿತಿ ನೀಡಿದ ವಕೀಲ

By

Published : Apr 22, 2021, 2:26 PM IST

ಬೆಳಗಾವಿ:ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕೆ ಕೋರ್ಟ್ ಸಿಬ್ಬಂದಿ ಬೆಳಗಾವಿ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಣ ಜಪ್ತಿ ಮಾಡಿಕೊಂಡ ಘಟನೆ ನಡೆಯಿತು.

ನಗರದ ನಾಲ್ಕನೇ ಜೆಎಂಎಫ್​ಸಿ ನ್ಯಾಯಾಲಯದ ಆದೇಶದ ಹಿನ್ನೆಲೆ ಎಸಿ ಕಚೇರಿಗೆ ಆಗಮಿಸಿದ ಕೋರ್ಟ್ ಸಿಬ್ಬಂದಿ ಅಪಾರ ಪ್ರಮಾಣದ ಪೀಠೋಪಕರಣ ಜಪ್ತಿ ಮಾಡಿಕೊಂಡರು.

ಬೆಳಗಾವಿ ಎಸಿ ಕಚೇರಿ ಪೀಠೋಪಕರಣ ಜಪ್ತಿ ಬಗ್ಗೆ ಮಾಹಿತಿ ನೀಡಿದ ವಕೀಲ

ಸಾಂಬ್ರಾ ಬಳಿ ಏರ್‌ಫೋರ್ಸ್‌ ಅಧಿಕಾರಿಗಳಿಗೆ ಕ್ವಾಟ್ರಸ್‌ ನಿರ್ಮಿಸಲು ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ರೈತರ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ವೇಳೆ 30 ಕುಟುಂಬಗಳು 35 ಎಕರೆ ಜಮೀನು ಕಳೆದುಕೊಂಡಿದ್ದರು. ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ ರೈತರು ಕೋರ್ಟ್ ಮೆಟ್ಟಿಲೇರಿದ್ದರು.

ಪರಿಹಾರ ನೀಡದ್ದಕ್ಕೆ ಎಸಿ ಕಚೇರಿ ಪೀಠೋಪಕರಣ ‌ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ಮಾಡಿತ್ತು. ಬಡ್ಡಿ ಸಹಿತ 5 ಕೋಟಿಗೂ ಅಧಿಕ ರೂಪಾಯಿ ಪರಿಹಾರ ಬರಬೇಕಿದೆ ಎಂದು ರೈತರ ಪರ ವಕೀಲ ಅಪ್ಪಾಸಾಹೇಬ್ ಸದರಜೋಶಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details