ಕರ್ನಾಟಕ

karnataka

ETV Bharat / state

ಒಂದೇ ದಿನ ದಾಖಲೆಯ ಲಸಿಕೆ..ದೇಶದಲ್ಲೇ ಅತೀ ಹೆಚ್ಚು ಲಸಿಕೆ ನೀಡಿದ ನಗರದಲ್ಲಿ ಬೆಳಗಾವಿಗೆ 2ನೇ ಸ್ಥಾನ - ಲಸಿಕಾ ಮೇಳ.

ಶುಕ್ರವಾರ(ಸೆ.17) ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಲಸಿಕಾ ಮೇಳದಲ್ಲಿ ಬೆಳಗಾವಿ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಒಟ್ಟು 2,57,604 ಲಸಿಕೆ ನೀಡಲಾಗಿದೆ ಎಂದಿದ್ದಾರೆ.

belagavi-was-the-2nd-most-vaccinated-city-in-the-country
ಒಂದೇ ದಿನ ದಾಖಲೆಯ ಲಸಿಕೆ

By

Published : Sep 18, 2021, 1:45 PM IST

ಬೆಳಗಾವಿ: ದೇಶಾದ್ಯಂತ ನಿನ್ನೆ ನಡೆದ ಮೆಗಾ‌ ಲಸಿಕಾ ಮೇಳದಲ್ಲಿ ಇಡೀ ದೇಶದಲ್ಲಿಯೇ ಬೆಳಗಾವಿ ಜಿಲ್ಲೆಯು ಲಸಿಕೆ ವಿತರಣೆಯಲ್ಲಿ 2ನೇ ಸ್ಥಾನ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಡಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 4,09,977 ಲಸಿಕೆ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೆ.17 ರಂದು‌‌ ಒಂದೇ ದಿನ 2,57,604 ಲಸಿಕೆ ನೀಡುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಬೆಳಗಾವಿಯು 3 ಲಕ್ಷ ಲಸಿಕೆ ನೀಡುವ ಗುರಿ ಹೊಂದಿತ್ತು. ನಿರೀಕ್ಷಿತ ಗುರಿ ಸಾಧನೆಯಾಗದಿದ್ದರೂ ಒಟ್ಟಾರೆ ಲಸಿಕೆ ಪ್ರಮಾಣದಲ್ಲಿ ಇಡೀ ದೇಶದಲ್ಲಿಯೇ ಅತೀ ಹೆಚ್ಚು ಲಸಿಕೆ ನೀಡುವುದರಲ್ಲಿ ದ್ವಿತೀಯ ಸ್ಥಾನ‌ ಗಳಿಸಿರುವುದು ಹೆಮ್ಮೆಯ ವಿಷಯ ಎಂದಿದ್ದಾರೆ.

ದೇಶದಲ್ಲೇ ಅತೀ ಹೆಚ್ಚು ಲಸಿಕೆ ನೀಡಿದ ನಗರದಲ್ಲಿ ಬೆಳಗಾವಿಗೆ 2ನೇ ಸ್ಥಾನ

ಈ ಸಾಧನೆಗೆ ಶ್ರಮಿಸಿದ ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನಗರ ಸ್ಥಳೀಯ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜೊತೆಗೆ ಸಾರ್ವಜನಿಕರಿಗೂ ಕೃತಜ್ಞತೆ ಅರ್ಪಿಸಿದ್ದಾರೆ.

ಇದನ್ನೂ ಓದಿ:ನಿನ್ನೆ ಒಂದೇ ದಿನ ರಾಜ್ಯದಲ್ಲಿ 29.50 ಲಕ್ಷ ಲಸಿಕೆ ವಿತರಣೆ.. ದೇಶದಲ್ಲೇ ಅತೀ ಹೆಚ್ಚು ವ್ಯಾಕ್ಸಿನ್​ ನೀಡಿದ ಕರ್ನಾಟಕ

ABOUT THE AUTHOR

...view details