ಬೆಳಗಾವಿ:ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯವನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ, ಭಾರತೀಯ ಬೌದ್ಧ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು.
ಬೆಳಗಾವಿ: ಶ್ರೀರಾಮ ಮಂದಿರ ನಿರ್ಮಾಣ ಕಾರ್ಯವನ್ನು ತಕ್ಷಣ ನಿಲ್ಲಿಸುವಂತೆ ರಾಷ್ಟ್ರಪತಿಗಳಿಗೆ ಮನವಿ - Srirama Mandir at Ayodya
ಉತ್ತರ ಪ್ರದೇಶದ ಅಯೋಧ್ಯೆ (ಸಾಕೇತ್) ನಗರದಲ್ಲಿರುವ ಭೂಮಿಯನ್ನು ಉತ್ಖನನ ಮಾಡುವ ವೇಳೆ 2000 ವರ್ಷಗಳಷ್ಟು ಹಳೆಯದಾದ ಬುದ್ಧನ ವಿಗ್ರಹಗಳು, ಶಾಸನಗಳು, ಧಮ್ಮಚಕ್ರಗಳು ಸೇರಿದಂತೆ ಇತ್ಯಾದಿ ಐತಿಹಾಸಿಕ ವಸ್ತುಗಳು ಸಿಗುತ್ತಿವೆ. ಹಾಗಾಗಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯವನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಭಾರತೀಯ ಬೌದ್ಧ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ಸಂಘದ ಪದಾಧಿಕಾರಿಗಳು, ಉತ್ತರ ಪ್ರದೇಶದ ಅಯೋಧ್ಯೆ (ಸಾಕೇತ್) ನಗರದಲ್ಲಿರುವ ಭೂಮಿಯನ್ನು ಉತ್ಖನನ ಮಾಡುವ ವೇಳೆ 2000 ವರ್ಷಗಳಷ್ಟು ಹಳೆಯದಾದ ಬುದ್ಧನ ವಿಗ್ರಹಗಳು, ಶಾಸನಗಳು, ಧಮ್ಮಚಕ್ರಗಳು ಸೇರಿದಂತೆ ಇತ್ಯಾದಿ ಐತಿಹಾಸಿಕ ವಸ್ತುಗಳು ಸಿಗುತ್ತಿವೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಹಲವು ಭಾರಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಮಾಡದಂತೆ ಮನವಿ ಸಲ್ಲಿಸಿದರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಕೇಂದ್ರ ಸರ್ಕಾರ ಇನ್ನಾದರೂ ಬೌದ್ಧನ ಚಿತ್ರಗಳು ಹಾಗೂ ಐತಿಹಾಸಿಕ ಪ್ರಾಚೀನ ಸ್ಮಾರಕಗಳನ್ನು ನಾಶಮಾಡುವುದು ಹಾಗೂ ಬದಲಾಯಿಸುವುದು ಬಿಟ್ಟು ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಬೇಕು. ಇದಲ್ಲದೇ ಅಯೋಧ್ಯೆ (ಸಾಕೇತ್) ನಗರದಲ್ಲಿ ಕಂಡುಬರುವ ಭೂಮಿಯನ್ನು ನೆಲ ಅಗೆಯುವುದನ್ನು ನಿಲ್ಲಿಸಬೇಕು. ಜೊತೆಗೆ ಬೌದ್ಧ ಭಿಕ್ಷುಗಳ ಜಂಟಿ ಸಮಿತಿ ಮತ್ತು ಭಾರತರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಭಾರತೀಯ ಬೌದ್ಧ ಮಹಾಸಭಾ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಭೀಮರಾವ್ ಯಶ್ವಂತರಾವ್ ಅಂಬೇಡ್ಕರ್ ನೇತೃತ್ವದಲ್ಲಿ ಉತ್ಖನನ ಮಾಡಬೇಕು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.