ಕರ್ನಾಟಕ

karnataka

ETV Bharat / state

ಬೆಳಗಾವಿ: ರಜೆಗೆ ಬಂದಿದ್ದ ಯೋಧ, ಮೂವರು ಪೊಲೀಸರಿಗೆ ಕೊರೊನಾ ದೃಢ - coronavirus in Belagavi

ರಜೆಗೆಂದು ಬಂದಿದ್ದ ಖಾನಾಪುರ ‌ತಾಲೂಕಿನ ಕೊರವಿಕೊಪ್ಪ ಗ್ರಾಮದ ಯೋಧನನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ವೇಳೆ ಯೋಧನ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ‌ಕಳುಹಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಯೋಧನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೆಳಗಾವಿ ಯೋಧನಿಗೆ ಕೊರೊನಾ
ಬೆಳಗಾವಿ ಯೋಧನಿಗೆ ಕೊರೊನಾ

By

Published : Jul 4, 2020, 4:55 PM IST

ಬೆಳಗಾವಿ: ಇತ್ತೀಚೆಗಷ್ಟೇ ರಜೆಗೆಂದು ತವರಿಗೆ ಬಂದಿದ್ದ ಯೋಧ ಹಾಗೂ ಮೂವರು ಕೆಎಸ್ಆರ್​ಪಿ ಕಾನ್​ಸ್ಟೇಬಲ್‌ಗಳಿಗೆ ಕೊರೊನಾ ‌ಸೋಂಕು ದೃಢಪಟ್ಟಿದೆ.

ಜಿಲ್ಲಾಡಳಿತ ನಾಲ್ವರು ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ‌ಮಾಡಿದೆ. ರಜೆಗೆಂದು ಬಂದಿದ್ದ ಖಾನಾಪುರ ‌ತಾಲೂಕಿನ ಕೊರವಿಕೊಪ್ಪ ಗ್ರಾಮದ ಯೋಧನನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ವೇಳೆ ಯೋಧನ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ‌ಕಳುಹಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಯೋಧನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಂದು ಬೆಳಗ್ಗೆ ಯೋಧನನ್ನು ಕೋವಿಡ್ ‌ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಬೆಳಗಾವಿ ಜಿಲ್ಲೆ ನಿಪ್ಪಾಣಿ ‌ಸಮೀಪದ ಕುಗನೊಳ್ಳಿ ಚೆಕ್ ಪೋಸ್ಟ್ ಅಲ್ಲಿ ಕಾರ್ಯನಿರ್ವಹಿದ್ದ ಮೂವರು ಕೆಎಸ್ಆರ್​ಪಿ​ ‌ಪೊಲೀಸ್ ಸಿಬ್ಬಂದಿಗೆ ಕೋವಿಡ್​‌‌ ದೃಢಪಟ್ಟಿದೆ. ಜಿಲ್ಲಾ ಮೀಸಲು ಪೊಲೀಸ್ ಕಾನ್​ಸ್ಟೇಬಲ್ ಆಗಿರುವ ಮೂವರನ್ನು ಇಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿಯ ಪೊಲೀಸ್ ವಸತಿ ಗೃಹದಲ್ಲಿ ಈ ಮೂವರು ಪೊಲೀಸರು ವಾಸವಿದ್ದರು. ಪೇದೆಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ.

ABOUT THE AUTHOR

...view details