ಬೆಳಗಾವಿ: ನಗರದ ರಸ್ತೆಗಳ ಮೇಲೆ ಪೊಲೀಸರು ಕೊರೊನಾ ವೈರಸ್ ಕುರಿತು ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ರಸ್ತೆ ಮೇಲೆ ಚಿತ್ರ ಬಿಡಿಸಿ ಕೊರೊನಾ ಕುರಿತು ಕುಂದಾನಗರಿ ಪೊಲೀಸರಿಂದ ಜಾಗೃತಿ - ರಸ್ತೆ ಮೇಲೆ ಚಿತ್ರ ಬಿಡಿಸಿ ಕೊರೊನಾ ಜಾಗೃತಿ
ಬೆಳಗಾವಿಯಲ್ಲಿ ಸಾರ್ವಜನಿಕರು ರಸ್ತೆಗೆ ಬರದಂತೆ ಸೂಚನೆ ನೀಡುವ ಬರಹಗಳ ಚಿತ್ರವನ್ನ ಪೊಲೀಸರು ದಾರಿಯ ಮೇಲೆ ಬಿಡಿಸುತ್ತಿದ್ದಾರೆ.
ಕುಂದಾನಗರಿ ಪೊಲೀಸರು
ಸಾರ್ವಜನಿಕರು ರಸ್ತೆಗೆ ಬರದಂತೆ ಸೂಚನೆ ನೀಡುವ ಬರಹಗಳ ಚಿತ್ರ ಬಿಡಿಸಲಾಗುತ್ತಿದೆ. ನಗರದ ಉದ್ಯಮಬಾಗ ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ ಈ ರೀತಿ ಚಿತ್ರ ಬಿಡಿಸಿ ಸಾರ್ವಜನಿಕರು ಹೊರಗಡೆ ಬರದಂತೆ ಜನಜಾಗೃತಿ ಮೂಡಿಸುತ್ತಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ರಸ್ತೆ ಮೇಲೆ ‘ಕೊರೊನಾ ಡೇಂಜರ್.. ನನ್ನಿಂದ ದೂರವಿರಿ’ ಎಂದು ಬರೆದು ಕೊರೊನಾ ಚಿತ್ರ ಬಿಡಿಸಿದ್ದಾರೆ. ಉದ್ಯಮಬಾಗ ಸಿಪಿಐ ದಯಾನಂದ ಶೇಗುಣಸಿ ಹಾಗೂ ಸಿಬ್ಬಂದಿ ವಿಭಿನ್ನ ರೀತಿಯಲ್ಲಿ ಕೋವಿಡ್-19 ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.