ಕರ್ನಾಟಕ

karnataka

ETV Bharat / state

ಬೆಳಗಾವಿ ಕಮಿಷನರ್ ತ್ಯಾಗರಾಜನ್​​ ತಲೆದಂಡ.. ನೂತನ ಆಯುಕ್ತರಾಗಿ ಡಾ.ಬೋರಲಿಂಗಯ್ಯ - ಬೆಳಗಾವಿ ನಗರ ನೂತನಪೊಲೀಸ್ ಆಯುಕ್ತ ಬೋರಲಿಂಗಯ್ಯ ನೇಮಕ

ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ. ನೂತನ ಆಯುಕ್ತರನ್ನಾಗಿ ಡಾ.ಬೋರಲಿಂಗಯ್ಯ ಅವರನ್ನು ನೇಮಕ ಮಾಡಲಾಗಿದೆ.

belagavi-police-commissioner-tyagarajan-transferred
ಬೆಳಗಾವಿ ಕಮೀಷನರ್ ತ್ಯಾಗರಾಜನ್​​ ತಲೆದಂಡ

By

Published : Jan 1, 2022, 10:34 AM IST

ಬೆಳಗಾವಿ:ಬೆಳಗಾವಿ ಅಧಿವೇಶನದ ವೇಳೆ ಕಲ್ಲು ತೂರಾಟ, ರಾಯಣ್ಣ ಮೂರ್ತಿಗೆ ಹಾನಿ ಪ್ರಕರಣ ಸೇರಿದಂತೆ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಆರೋಪದಡಿ ಬೆಳಗಾವಿ ನಗರ ಪೊಲೀಸ್ ಆಯುಕ್ತರ ತಲೆ ದಂಡವಾಗಿದೆ. ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.

ನೂತನ ಪೊಲೀಸ್ ಆಯುಕ್ತರನ್ನಾಗಿ ಡಾ.ಬೋರಲಿಂಗಯ್ಯ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಲಾಗಿದೆ. ಕೆ. ತ್ಯಾಗರಾಜ ಅವರನ್ನು ಬೆಂಗಳೂರು ಪೊಲೀಸ್ ನೇಮಕಾತಿ ವಿಭಾಗಕ್ಕೆ ವರ್ಗ ಮಾಡಲಾಗಿದೆ.

ಕೆ.ತ್ಯಾಗರಾಜನ್

ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಉದ್ಧಟತನ ತೋರಿತ್ತು. ಮಹಾಮೇಳ ಹೆಸರಿನಲ್ಲಿ ಎಂಇಎಸ್ ಭಾಷಾ ಕಿಚ್ಚು ಹೊತ್ತಿಸಲು ಯತ್ನಿಸಿತ್ತು. ಅಲ್ಲದೇ ಕಲ್ಲು ತೂರಾಡಿ ಸರ್ಕಾರಿ ವಾಹನ ಜಖಂಗೊಳಿಸಲಾಗಿತ್ತು. ರಾಯಣ್ಣ ಮೂರ್ತಿಗೆ ಹಾನಿ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 38 ಜನರನ್ನು ಪೊಲೀಸರು ಬಂಧಿಸಿದ್ದರು.

ಈ ಎಲ್ಲ ಗಲಾಟೆಗಳಿಗೆ ಪೊಲೀಸ್ ವೈಫಲ್ಯವೇ ಕಾರಣ ಎಂಬ ಆರೋಪವೂ ಕೇಳಿ ಬಂದಿತ್ತು. ಇದೀಗ ಸರ್ಕಾರ ನಗರ ಪೊಲೀಸ್ ‌ಆಯುಕ್ತರನ್ನೇ ಬದಲಾಯಿಸಿದೆ.

ಇದನ್ನೂ ಓದಿ:ನಿಷೇಧಾಜ್ಞೆ ಉಲ್ಲಂಘಿಸಿ ಪಾರ್ಟಿ.. ರಾಮನಗರದ ರೆಸಾರ್ಟ್​ ಮೇಲೆ ಪೊಲೀಸರ ದಾಳಿ

ABOUT THE AUTHOR

...view details