ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ: ಖಾಕಿ ಖೆಡ್ಡಾಕ್ಕೆ ಆರೋಪಿಗಳು - country made pistols sell case

ಬೆಳಗಾವಿಯಲ್ಲಿ ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ (belagavi country made pistols sell) ಮಾಡುತ್ತಿದ್ದ ಗ್ಯಾಂಗ್ ಖಾಕಿ ಖೆಡ್ಡಾಕ್ಕೆ ಬಿದ್ದಿದೆ. ಜಿಲ್ಲೆಯ ಖಾನಾಪುರ ತಾಲೂಕಿನ ಉಚಗಾಂವ ಕ್ರಾಸ್ ಬಳಿ ಗ್ಯಾಂಗ್ ಬಂಧಿಸಲಾಗಿದ್ದು, ಗುಂಪಾಗಿ ನಿಂತವರನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

belagavi-police-arrested-gang-selling-country-made-pistols
ಬೆಳಗಾವಿಯಲ್ಲಿ ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ: ಖಾಕಿ ಖೆಡ್ಡಾಕ್ಕೆ ಆರೋಪಿಗಳು

By

Published : Nov 15, 2021, 12:32 PM IST

Updated : Nov 15, 2021, 1:33 PM IST

ಬೆಳಗಾವಿ:ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಗ್ಯಾಂಗ್ (country made pistols selling gang arrested in belagavi) ಖಾಕಿ ಖೆಡ್ಡಾಕ್ಕೆ ಬಿದ್ದಿದೆ. ಜಿಲ್ಲೆಯ ಖಾನಾಪುರ(khanapura) ತಾಲೂಕಿನ ಉಚಗಾಂವ ಕ್ರಾಸ್ ಬಳಿ ಗ್ಯಾಂಗ್ ಬಂಧಿಸಲಾಗಿದ್ದು, ಗುಂಪಾಗಿ ನಿಂತವರನ್ನು ವಿಚಾರಣೆ ನಡೆಸಿದಾಗ ಪ್ರಕರಣ (country made pistols sell) ಬೆಳಕಿಗೆ ಬಂದಿದೆ.

ಪೊಲೀಸರನ್ನು ಕಂಡು ಕೆಲವರು ಎಸ್ಕೇಪ್ ಆಗಲು ಮುಂದಾಗಿದ್ದು, ಆಗ ಬಹುತೇಕರನ್ನು ಹಿಡಿದು ವಿಚಾರಣೆ ನಡೆಸಲಾಗಿದೆ. ಆಗ ಕಂಟ್ರಿ ಪಿಸ್ತೂಲ್ ಮಾರಾಟ ಮಾಡಲು ಬಂದಿರುವುದು ತಿಳಿದುಬಂದಿದೆ. ಸ್ಥಳದಲ್ಲಿ ಎರಡು ಕಂಟ್ರಿ ಮೇಡ್ ಪಿಸ್ತೂಲ್(country made pistols) ಹಾಗೂ ಮೂರು ಜೀವಂತ ಗುಂಡುಗಳನ್ನು(live bullets) ವಶಕ್ಕೆ ಪಡೆಯಲಾಗಿದೆ.

ಬೆಳಗಾವಿಯಲ್ಲಿ ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ: ಖಾಕಿ ಖೆಡ್ಡಾಕ್ಕೆ ಆರೋಪಿಗಳು

ಪಿಸ್ತೂಲ್ ಮಾರಾಟ:

ಮಹಾರಾಷ್ಟ್ರದ(maharashtra) ತುಳಸಿದಾಸ್ ಜೋಶಿ ಮತ್ತು ನಾರಾಯಣ ಪಾಟೀಲ್ ಪಿಸ್ತೂಲ್ ಮಾರಾಟ ಮಾಡಲು ಬಂದಿದ್ದರು. ಬೆಳಗಾವಿ ಮೂಲದವರು ಈ ಆರೋಪಿಗಳಿಗೆ ಸಾಥ್ ನೀಡಿದ್ದಾರೆ. ಗದಗ ಜಿಲ್ಲೆಯ ಅಣ್ಣಿಗೇರಿ ಮೂಲದ ರೌಡಿಶೀಟರ್ ಉಮೇಶ್ ಬೆಳೆಗೇರಿಗೆ(rowdy sheeter umesh belegeri) ಪಿಸ್ತೂಲ್ ಮಾರಾಟ ಮಾಡಲಾಗುತ್ತಿತ್ತು. ಮಾರಾಟದ ವೇಳೆ ಗ್ಯಾಂಗ್​ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ‌. ಮೂವರು ಮಹಾರಾಷ್ಟ್ರ, ಓರ್ವ ಮಧ್ಯಪ್ರದೇಶ, ಕರ್ನಾಟಕದ ನಾಲ್ವರು ಆರೋಪಿಗಳನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ.

ವಶಕ್ಕೆ ಪಡೆದ ಪಿಸ್ತೂಲ್​

ಮಧ್ಯಪ್ರದೇಶದ ಇನ್ನೋರ್ವ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ. ಮಧ್ಯಪ್ರದೇಶದಿಂದ ಮಹಾರಾಷ್ಟ್ರಕ್ಕೆ ಪಿಸ್ತೂಲ್ ಪೂರೈಕೆ ಆಗುತ್ತದೆ. ನಂತರ ಗೋವಾ (goa), ಬೆಳಗಾವಿಗೆ ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ ಮಾಡಲಾಗುತ್ತಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಪೇಜಾವರ ಶ್ರೀಗಳ ಕುರಿತು ವಿವಾದಾತ್ಮಕ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ನಾದ ಬ್ರಹ್ಮ

Last Updated : Nov 15, 2021, 1:33 PM IST

ABOUT THE AUTHOR

...view details