ಬೆಳಗಾವಿ:ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ಆವರಿಸಿದೆ. ಬೆಳಗಾವಿ ಕೂಡಾ ಇದಕ್ಕೆ ಹೊರತಾಗಿಲ್ಲ. ಜಿಲ್ಲೆಯಲ್ಲಿ ಇದುವರೆಗೂ 116 ಕೊರೊನಾ ಪ್ರಕರಣಗಳು ವರದಿಯಾಗಿದೆ. ಆದರೆ ಜನರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ.
ಲಾಕ್ಡೌನ್ ನಿಯಮ ಗಾಳಿಗೆ ತೂರಿ ಮಾವು ಖರೀದಿಗೆ ಮುಗಿಬಿದ್ಧ ಬೆಳಗಾವಿ ಜನತೆ - ಬೆಳಗಾವಿ ಹಣ್ಣಿನ ಮಾರುಕಟ್ಟೆ
ಬೆಳಗಾವಿಯ ಗಾಂಧಿನಗರದಲ್ಲಿರುವ ಹಣ್ಣಿನ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರಿಗಳು ಹಾಗೂ ಗ್ರಾಹಕರು ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿ ವಹಿವಾಟು ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾವಿನಹಣ್ಣು ಖರೀದಿಸಲು ಮುಗಿಬಿದ್ದಿದ್ದಾರೆ.
ಲಾಕ್ಡೌನ್ ನಿಯಮ ಗಾಳಿಗೆ ತೂರಿ ಮಾವು ಖರೀದಿಗೆ ಮುಗಿಬಿದ್ಧ ಜನ
ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾವಿನಹಣ್ಣು ಖರೀದಿಗೆ ಮುಗಿಬಿದ್ದಿದ್ದಾರೆ. ನಗರದ ಗಾಂಧಿನಗರದಲ್ಲಿರುವ ಹಣ್ಣಿನ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರಿಗಳು ಹಾಗೂ ಗ್ರಾಹಕರು ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿ ವಹಿವಾಟು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಪ್ರಕಣಗಳು ಹೆಚ್ಚುತ್ತಿದ್ದರೂ ಮಾಸ್ಕ್ ಕೂಡಾ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಮಾವಿನಹಣ್ಣು ಖರೀದಿಸಲು ಗುಂಪು ಗುಂಪಾಗಿ ಸೇರಿದ್ದಾರೆ. ಈ ದೃಶ್ಯ ನೋಡಿದರೆ ಜನರಿಗೆ ಕೊರೊನಾ ಬಗ್ಗೆ ಯಾವ ಆತಂಕವೂ ಇಲ್ಲ ಎಂಬಂತೆ ಕಾಣುತ್ತದೆ.