ಬೆಳಗಾವಿ:ಕೋವಿಡ್ ಹಿನ್ನೆಲೆ ಪ್ರಸಕ್ತ ವರ್ಷ ನಾಗರಿಕರು ಘನತ್ಯಾಜ್ಯ ನಿರ್ವಹಣೆ ಸೇವಾಶುಲ್ಕ ಭರಿಸುವುದಕ್ಕೆ ವಿನಾಯಿತಿ ನೀಡಲು ಪಾಲಿಕೆಯ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅನುಮೋದನೆ ನೀಡಿದ್ದಾರೆ ಎಂದು ಪಾಲಿಕೆ ಆಯುಕ್ತ ಜಗದೀಶ್ ಕೆ.ಹೆಚ್. ತಿಳಿಸಿದ್ದಾರೆ.
ಬೆಳಗಾವಿಗರಿಗೆ ಗುಡ್ ನ್ಯೂಸ್; ಘನತ್ಯಾಜ್ಯ ನಿರ್ವಹಣಾ ಸೇವಾಶುಲ್ಕ ಪಾವತಿಗೆ ವಿನಾಯಿತಿ - Solid Waste Management Service
ಲಾಕ್ಡೌನ್ ಜಾರಿಯಿಂದ ಸಾರ್ವಜನಿಕರಿಗೆ ಘನತ್ಯಾಜ್ಯ ನಿರ್ವಹಣೆ ಸೇವಾಶುಲ್ಕ ಭರಿಸಲು ತೊಂದರೆಯಾಗುತ್ತಿದೆ ಎಂಬುದನ್ನು ಮನಗಂಡು ಹಾಗೂ ಜನಪ್ರತಿನಿಧಿಗಳ ಕೋರಿಕೆ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ಪ್ರಸಕ್ತ ವರ್ಷ ಸೇವಾಶುಲ್ಕಕ್ಕೆ ವಿನಾಯಿತಿ ನೀಡಿದ್ದಾರೆ ಎಂದು ಆಯುಕ್ತ ಜಗದೀಶ್ ಕೆ.ಹೆಚ್. ತಿಳಿಸಿದ್ದಾರೆ.
ಬೆಳಗಾವಿಗರಿಗೆ ಪಾಲಿಕೆಯಿಂದ ಗುಡ್ ನ್ಯೂಸ್: ಘನತ್ಯಾಜ್ಯ ನಿರ್ವಹಣಾ ಸೇವಾಶುಲ್ಕ ಪಾವತಿಗೆ ವಿನಾಯಿತಿ
ಒಂದು ವೇಳೆ ಯಾರಾದರೂ ಸೇವಾಶುಲ್ಕ ಪಾವತಿಸಿದ್ದಲ್ಲಿ ಮುಂದಿನ ವರ್ಷ ಅದನ್ನು ಮರುಹೊಂದಾಣಿಕೆ ಮಾಡಿಕೊಳ್ಳಲು ಪಾಲಿಕೆಯ ಆಡಳಿತಾಧಿಕಾರಿಗಳು ಅನುಮೋದಿಸಿರುತ್ತಾರೆ. ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಲಾಕ್ಡೌನ್ ಜಾರಿಯಿಂದ ಸಾರ್ವಜನಿಕರಿಗೆ ಘನತ್ಯಾಜ್ಯ ನಿರ್ವಹಣೆ ಸೇವಾಶುಲ್ಕ ಭರಿಸಲು ತೊಂದರೆಯಾಗುತ್ತಿದೆ ಎಂಬುದನ್ನು ಮನಗಂಡು ಹಾಗೂ ಜನಪ್ರತಿನಿಧಿಗಳ ಕೋರಿಕೆ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ಪ್ರಸಕ್ತ ವರ್ಷ ಸೇವಾಶುಲ್ಕಕ್ಕೆ ವಿನಾಯಿತಿ ನೀಡಿದ್ದಾರೆ ಎಂದು ಆಯುಕ್ತ ಜಗದೀಶ್ ಕೆ.ಹೆಚ್. ತಿಳಿಸಿದ್ದಾರೆ.