ಬೆಳಗಾವಿ:ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕುತಂತ್ರದಿಂದ ಎಂಇಎಸ್ ಮತ ಪಡೆದಿತ್ತು. ಜಿಲ್ಲೆಯ ಹದಿಮೂರು ಜನ ಶಾಸಕರೆಲ್ಲರೂ ಸೇರಿ ಕೆಲಸ ಮಾಡಿದ್ರೇ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 58ವಾರ್ಡ್ಗಳಲ್ಲಿ 50 ವಾರ್ಡ್ಗಳನ್ನ ಗೆಲ್ಲುವ ವಿಶ್ವಾಸವಿದೆ ಎಂದು ಶಾಸಕರಿಗೆ ಸಚಿವ ಉಮೇಶ್ ಕತ್ತಿ ಕರೆ ನೀಡಿದರು.
ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಹಿನ್ನೆಲೆ ನಗರದ ಧರ್ಮನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ವಿಶೇಷ ಸಭೆ ಜರುಗಿತು. ಈ ಸಂದರ್ಭದಲ್ಲಿ ಅರಣ್ಯ ಮತ್ತು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಎಪ್ಪತ್ತು ವರ್ಷದಿಂದ ದೇಶದಲ್ಲಿ ಸರಿಯಾದ ಅಭಿವೃದ್ಧಿಯಾಗಿರಲಿಲ್ಲ. ಕೇಂದ್ರ ಸರ್ಕಾರದ ಯೋಜನೆಯಿಂದ ಅಭಿವೃದ್ಧಿಯಾಗುತ್ತಿದೆ.
ಈ ಚುನಾವಣೆ ಜಾತಿ, ಹೆಸರು, ಎಂಇಎಸ್ ಮೇಲೆ ಆಗುವುದಿಲ್ಲ. ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕುತಂತ್ರದಿಂದ ಎಂಇಎಸ್ ಮತ ಪಡೆದಿತ್ತು. ಹದಿಮೂರು ಜನ ಶಾಸಕರೆಲ್ಲರೂ ಸೇರಿ ಕೆಲಸ ಮಾಡಿದ್ರೇ 58ವಾರ್ಡ್ಗಳಲ್ಲಿ 50 ವಾರ್ಡ್ ಗಳನ್ನ ಗೆಲ್ಲುವ ವಿಶ್ವಾಸವಿದೆ. ನಲವತ್ತು ವರ್ಷದಿಂದ ಬೆಳಗಾವಿಯಲ್ಲಿ ಬೇರೆ ಧ್ವಜ ಹಾರುತ್ತಿದೆ. ಈ ಬಾರಿ ಬಿಜೆಪಿ ಧ್ವಜ ಹಾರಿಸುವ ಕೆಲಸ ಮಾಡೋಣ. ನಾನು ಹದಿನೈದು ದಿನ ಬೆಳಗಾವಿಯಲ್ಲಿದ್ದು ಚುನಾವಣೆಯಲ್ಲಿ ಭಾಗಿಯಾಗುತ್ತೇನೆ ಎಂದು ಕತ್ತಿ ಹೇಳಿದರು.