ಚಿಕ್ಕೋಡಿ (ಬೆಳಗಾವಿ): ಯೋಗದಲ್ಲಿ ಸಾಧನೆ ಮಾಡುವವರ ಪಟ್ಟಿ ನಿತ್ಯ ಬೆಳೆಯುತ್ತಲೇ ಇದೆ. ಇದೀಗ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ತುಕಾರಾಮ್ ಕೋಳಿ ಅತೀ ಹೆಚ್ಚು ಸೂರ್ಯ ನಮಸ್ಕಾರ ಮೂಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
50 ವರ್ಷದ ಆಸುಪಾಸಿನ ತುಕಾರಾಮ ಕೋಳಿ ಅವರು ಅರ್ಧ ಗಂಟೆಯಲ್ಲಿ 278 ಬಾರಿ ಸೂರ್ಯ ನಮಸ್ಕಾರ ಹಾಕಿ ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. ಯೋಗಭ್ಯಾಸ ಪ್ರಾರಂಭ ಮಾಡುತ್ತಿದ್ದಂತೆಯೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದರು. ಇದನ್ನೇ ಮುಂದುವರಿಸಿದ್ದ ಅವರು ಇದೀಗ ಏಷ್ಯನ್ ಬುಕ್ ಆಫ್ ರೇಕಾರ್ಡ್ನಲ್ಲಿ ಸೇರ್ಪಡೆಯಾಗಿದ್ದಾರೆ.
ಏಷ್ಯಾ ಬುಕ್ ಆಫ್ ರೇಕಾರ್ಡ್ ಸೇರಿದ ಕುಂದಾನಗರಿ ವೀರ ಕಲ್ಲೋಳ ಗ್ರಾಮದ ಕೃಷ್ಣಾ ನದಿ ದಂಡೆಯಲ್ಲಿ ಹಾಗೂ ಚಿಕ್ಕೋಡಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಿತ್ಯ ಸುಮಾರು 1 ಗಂಟೆಗೂ ಹೆಚ್ಚು ಸಮಯ ಸೂರ್ಯ ಸಮಸ್ಕಾರ ಅಭ್ಯಾಸ ಮಾಡುವ ಜೊತೆಗೆ ಇತರರಿಗೂ ಯೋಗಭ್ಯಾಸ ತರಬೇತಿ ನೀಡುತ್ತಾರೆ. ಮೈಕೈ ನೋವು, ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾಗ ಸೂರ್ಯ ನಮಸ್ಕಾರ ಮಾಡುವುದು ಆರೋಗ್ಯ ವೃದ್ಧಿಸಲಿದೆ ಎಂಬುದನ್ನು ಅರಿತು ಈ ಕಾರ್ಯಕ್ಕೆ ಮುಂದಾಗಿದ್ದು, ಈಗ ಇಡೀ ದೇಶ ತಿರುಗಿ ನೋಡುವ ಕಾರ್ಯ ಮಾಡಿದ್ದಾರೆ.
ಏಷ್ಯಾ ಬುಕ್ ಆಫ್ ರೇಕಾರ್ಡ್ ಸೇರಿದ ಕುಂದಾನಗರಿ ವೀರ ಇದನ್ನೂ ಓದಿ:ಕ್ಷೀರಭಾಗ್ಯ ಯೋಜನೆಯ ಹಾಲಿನಪುಡಿ ಅಕ್ರಮ ಸಾಗಣೆ ಆರೋಪ - ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಆರೋಪಿ