ಬೆಳಗಾವಿ: ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಎಂಇಎಸ್ ಕಾರ್ಯಕರ್ತರು ಮಾಸ್ಕ್ ಧರೀಸದೇ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ನಿಯಮವನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಬೆಳಗಾವಿ ಲೋಕಸಭೆ ಉಪಚುನಾವಣೆ: ಕೊರೊನಾ ನಿಯಮ ಗಾಳಿಗೆ ತೂರಿದ ಎಂಇಎಸ್! - ಬೆಳಗಾವಿ ಲೋಕಸಭಾ ಉಪಚುನಾವಣೆ 2021 ಸುದ್ದಿ,
ಅಭ್ಯರ್ಥಿ ಪ್ರಚಾರದ ವೇಳೆ ಎಂಇಎಸ್ ಪಕ್ಷದ ಕಾರ್ಯಕರ್ತರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ ಘಟನೆ ಬೆಳಗಾವಿಯಲ್ಲಿ ಕಂಡು ಬಂದಿದೆ.
ಇಲ್ಲಿನ ಶಾಹಾಪೂರ ನಗರದ ಶಿವಾಜಿ ಗಾರ್ಡ್ ಶಿವಾಜಿ ವೃತ್ತದಿಂದ ಬೆಳಗಾವಿ ಲೋಕಸಾಭಗೆ ಸ್ಪರ್ಧಿಸಿದ್ದ ಎಂಇಎಸ್ ಅಭ್ಯರ್ಥಿ ಶುಭಂ ಶಳಕೆ ಪರ ತೆರೆದ ವಾಹನದಲ್ಲಿ ಶಿವಸೇನೆ ವಕ್ತಾರ ಸಂಜಯ್ ರಾವುತ್ ಮತಯಾಚನೆ ಮಾಡಿದರು. ಈ ವೇಳೆ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಮತ್ತಷ್ಟು ಕೊರೊನಾ ಆತಂಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾಗೆ ಪ್ರತಿದಿನ ನೂರಾರು ಜನರು ಬಲಿ ಆಗುತ್ತಿದ್ದಾರೆ. ಇಷ್ಟಾದರೂ ಎಚ್ಚೆತ್ತುಕೊಳ್ಳದೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡ ಕೈಕಟ್ಟಿ ಕುಳಿತುಕೊಂಡಿದೆ.