ಕರ್ನಾಟಕ

karnataka

ETV Bharat / state

ಬೆಳಗಾವಿ ಲೋಕಸಭಾ ಉಪಚುನಾವಣೆ: 18 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ - ಬೆಳಗಾವಿ ಲೋಕಸಭಾ ಉಪಚುನಾವಣೆ

ಲೋಕಸಭಾ ಉಪಚುನಾವಣೆಗೆ ಸಲ್ಲಿಸಲಾದ ನಾಮಪತ್ರಗಳ ಪೈಕಿ ಒಟ್ಟು 18 ಸ್ಪರ್ಧಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.

belagavi-lok-sabha-by-election-18-candidates-nominated
ಬೆಳಗಾವಿ ಲೋಕಸಭಾ ಉಪಚುನಾವಣೆ

By

Published : Apr 1, 2021, 2:19 AM IST

ಬೆಳಗಾವಿ:ಲೋಕಸಭಾ ಉಪಚುನಾವಣೆಗೆ ಸಲ್ಲಿಸಲಾದ ನಾಮಪತ್ರಗಳ ಪೈಕಿ ಒಟ್ಟು 18 ಉಮೇದುದಾರರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ಹರೀಶ್ ತಿಳಿಸಿದ್ದಾರೆ.

ಬೆಳಗಾವಿ ಲೋಕಸಭಾ ಚುನಾವಣೆಗೆ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಉಮೇದುವಾರರಾದ ಮಂಗಲಾ ಸುರೇಶ್ ಅಂಗಡಿ (ಭಾರತೀಯ ಜನತಾ ಪಾರ್ಟಿ), ಸತೀಶ್ ಜಾರಕಿಹೊಳಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) ಇವರ ನಾಮಪತ್ರಗಳು ಕ್ರಮಬದ್ಧವಾಗಿವೆ.

ಅದೇ ರೀತಿ ನೊಂದಾಯಿತ ರಾಜಕೀಯ ಪಕ್ಷಗಳ ಉಮೇದುವಾರರಾದ ಅಶೋಕ ಪಾಂಡಪ್ಪ ಹಣಜಿ (ಸರ್ವ ಜನತಾ ಪಾರ್ಟಿ), ಕೃಷ್ಣಾ ಜಿ ಪುಂಡಲೀಕ ಪಾಟೀಲ (ಶಿವಸೇನಾ), ವಿವೇಕಾನಂದ ಬಾಬು ಘಂಟಿ(ಕರ್ನಾಟಕ ರಾಷ್ಟ್ರಸಮಿತಿ), ವೆಂಕಟೇಶ್ವರ ಮಹಾಸ್ವಾಮೀಜಿ(ಹಿಂದೂಸ್ಥಾನ ಜನತಾ ಪಾರ್ಟಿ), ಮರಲಿಂಗಣ್ಣವರ ಸುರೇಶ್ ಬಸ್ಸಪ್ಪಾ(ಕರ್ನಾಟಕ ಕಾರ್ಮಿಕರ ಪಕ್ಷ) ಇವರ ನಾಮಪತ್ರಗಳು ಕ್ರಮಬದ್ಧವಾಗಿರುತ್ತವೆ.

ಇನ್ನುಳಿದಂತೆ ಅಪ್ಪಾಸಾಹೇಬ ಶ್ರೀಪತಿ ಕುರಣೆ, ಗುರುಪುತ್ರ ಕೆಂಪಣ್ಣ ಕುಳ್ಳೂರ, ಗೌತಮ್ ಯಮನಪ್ಪ ಕಾಂಬಳೆ, ನಾಗಪ್ಪ ಕಳಸನ್ನವರ, ಬಸವರಾಜ.ದುಂ. ಹುದ್ದಾರ, ಭಾರತಿ ಚಿಕ್ಕನರಗುಂದ, ಶುಭಂ ವಿಕ್ರಾಂತ ಶೆಳಕೆ, ಶ್ರೀಕಾಂತ ಪಡಸಲಗಿ, ಸುರೇಶ ಬಸವಂತಪ್ಪ ಪರಗನ್ನವರ, ಸಂಗಮೇಶ ಚಿಕ್ಕನರಗುಂದ, ಹನುಮಂತ ನಾಗನೂರ ಎಲ್ಲರೂ (ಪಕ್ಷೇತರರು) ಇವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details