ಚಿಕ್ಕೋಡಿ:ಮಹಾರಾಷ್ಟ್ರದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಕೃಷ್ಣಾ, ವೇದಗಂಗಾ ಮತ್ತು ದೂಧ್ ಗಂಗಾ ನದಿಗಳ ಒಳ ಹರಿವಿನಲ್ಲಿ ಇಳಿಕೆಯಾಗಿದೆ. ಸದ್ಯ ಕೃಷ್ಣಾ ನದಿ ಒಳ ಹರಿವಿನ ಪ್ರಮಾಣ 76,000 ಕ್ಯೂಸೆಕ್ಗಿಂತ ಹೆಚ್ಚಿದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಷ್ ಸಂಪಗಾಂವಿ ಮಾಹಿತಿ ನೀಡಿದ್ದಾರೆ.
ಕೃಷ್ಣಾ ಒಳ ಹರಿವಿನ ಪ್ರಮಾಣ ಇಳಿಮುಖ: ನದಿ ತೀರದ ಜನರಿಗೆ ಸಂತಸ - ಕೃಷ್ಣಾ ನದಿ ಒಳ ಹರಿವು
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 69,000 ಕ್ಯೂಸೆಕ್, ದೂಧ್ಗಂಗಾ ನದಿಯಿಂದ 7,040 ಕ್ಯೂಸೆಕ್, ಒಟ್ಟು 76,000 ಕ್ಯೂಸೆಕ್ಗೂ ಅಧಿಕ ನೀರು ಕೃಷ್ಣಾಗೆ ಹರಿದು ಬರುತ್ತಿದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.
ಕೃಷ್ಣಾ ನದಿ ಒಳ ಹರಿವಿನ ಪ್ರಮಾಣ ಇಳಿಮುಖ
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 69,000 ಕ್ಯೂಸೆಕ್, ದೂಧ್ಗಂಗಾ ನದಿಯಿಂದ 7,040 ಕ್ಯೂಸೆಕ್ ಸೇರಿ ಒಟ್ಟು 76,000 ಕ್ಯೂಸೆಕ್ಗೂ ಅಧಿಕ ನೀರು ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಕಡಿಮೆಯಾಗಿರುವ ಬಗ್ಗೆ ವರದಿಯಾಗಿದೆ.
ಸದ್ಯ ಕೊಯ್ನಾ ಜಲಾಶಯ 98.78 ರಷ್ಟು, ವಾರಣಾ ಜಲಾಶಯ, ರಾಧಾನಗರಿ ಜಲಾಶಯ, ಕಣೇರ ಜಲಾಶಯ, ಧೂಮ್ ಜಲಾಶಯ, ಪಾಟಗಾಂವ್, ದೂಧ್ಗಂಗಾ ಜಲಾಶಯ ಸಂಪೂರ್ನ ಭರ್ತಿಯಾಗಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 1,04,000 ಹಾಗೂ ಆಲಮಟ್ಟಿ ಜಲಾಶಯದಿಂದ 1,30,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.