ಕರ್ನಾಟಕ

karnataka

ETV Bharat / state

ಕಾರಜೋಳ ನೇತೃತ್ವದಲ್ಲಿ ಬೆಳಗಾವಿ ಕೆಡಿಪಿ ಸಭೆ: ಮೂವರು ಸಚಿವರು, ಜಾರಕಿಹೊಳಿ‌ ಬ್ರದರ್ಸ್‌ ಗೈರು - Belgavi KDP meeting

ಬೆಳಗಾವಿ ಜಿಲ್ಲೆಯಲ್ಲಿ ನಡೆದ ಮೊದಲ ಕೆಡಿಪಿ ಸಭೆಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಗೈರಾಗಿದ್ದಾರೆ.

belgavi
ಕಾರಜೋಳ ನೇತೃತ್ವದಲ್ಲಿ ಕೆಡಿಪಿ ಸಭೆ

By

Published : Jul 8, 2021, 2:48 PM IST

ಬೆಳಗಾವಿ:ಈ ವರ್ಷದ ಬೆಳಗಾವಿ ಜಿಲ್ಲೆಯ ಮೊದಲ ಕೆಡಿಪಿ ಸಭೆಗೆ ಇಲ್ಲಿನ ಮೂವರು ಮಂತ್ರಿಗಳು ಹಾಗೂ ಜಾರಕಿಹೊಳಿ‌ ‌ಸಹೋದರರು ಗೈರಾಗಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಭೆ ನಡೆಯಿತು.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಸಭೆಯಿಂದ ದೂರ ಉಳಿದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಸಭೆಯಲ್ಲಿದ್ದರು.

ಸಚಿವರಾದ ಲಕ್ಷ್ಮಣ ‌ಸವದಿ, ಉಮೇಶ್ ಕತ್ತಿ ಹಾಗೂ ಶಶಿಕಲಾ ಜೊಲ್ಲೆ ಕೂಡ ಸಭೆಗೆ ಗೈರಾಗಿದ್ದಾರೆ. ಜವಳಿ ಖಾತೆ ಸಚಿವ ‌ಶ್ರೀಮಂತ ಪಾಟೀಲ ಸಭೆಗೆ ಹಾಜರಾಗಿದ್ದರು. ಉಳಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರು ಸಭೆಗೆ ಹಾಜರಾಗಿದ್ದರು.

ABOUT THE AUTHOR

...view details