ಬೆಳಗಾವಿ :ಕರ್ನಾಟಕ ರಾಜ್ಯೋತ್ಸವಕ್ಕೆ ಕುಂದಾನಗರಿ ಸಿಂಗಾರಗೊಂಡಿದ್ದು, ನಗರದ ಹೃದಯ ಭಾಗವಾದ ಚೆನ್ನಮ್ಮ ವೃತ್ತ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಮಧ್ಯ ರಾತ್ರಿಯಿಂದಲೇ ಕನ್ನಡ ಹಬ್ಬದ ಸಂಭ್ರಮಾಚರಣೆ ಪ್ರಾರಂಭಗೊಂಡಿದೆ.
ಕುಂದಾನಗರಿಯಲ್ಲಿ ಮಧ್ಯರಾತ್ರಿಯೇ ಕನ್ನಡ ಹಬ್ಬದ ಸಂಭ್ರಮ...!
ಕರ್ನಾಟಕ ರಾಜ್ಯೋತ್ಸವಕ್ಕೆ ಕುಂದಾನಗರಿ ಸಿಂಗಾರಗೊಂಡಿದ್ದು, ಚೆನ್ನಮ್ಮ ವೃತ್ತ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಅಲ್ಲದೆ ಕನ್ನಡ ಮನಸ್ಸುಗಳು ಈಗಿನಿಂದಲೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಪಟಾಕಿ ಸಿಡಿಸಿ ಕನ್ನಡ ಹಾಡಿಗೆ ಹೆಜ್ಜೆ ಹಾಕುತ್ತಿದ್ದು ನಾಳೆ ರಾತ್ರಿಯವರೆಗೂ ಈ ಸಂಭ್ರಮಾಚರಣೆ ಮುಂದುವರೆಯಲಿದೆ.
ಗಡಿನಾಡಲ್ಲಿ ಮೊಳಗಲಿದೆ ಕನ್ನಡ ಕಹಳೆಯ ಸದ್ದು
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬೆಳಗಾವಿಯಲ್ಲಿ ಆಚರಿಸುವ ಕನ್ನಡ ಹಬ್ಬಕ್ಕೆ ತನ್ನದೇ ಆದ ವಿಶೇಷತೆ ಇದೆ. ಇಲ್ಲಿನ ಕನ್ನಡ ಹಬ್ಬ ನೋಡಲು ರಾಜ್ಯದ ಬೇರೆ ಬೇರೆ ಕಡೆಯಿಂದ ಕನ್ನಡ ಪ್ರೇಮಿಗಳು ಆಗಮಿಸುತ್ತಾರೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರುವ ಜನರು ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸುವ ಅದ್ಬುತ ಕ್ಷಣಗಳಿಗೆ ಬೆಳಗಾವಿ ಸಾಕ್ಷಿಯಾಗುತ್ತದೆ.
ರಾಜ್ಯೋತ್ಸವಕ್ಕೆ ನಗರ ಸಿಂಗಾರಗೊಂಡಿದ್ದು, ಕನ್ನಡ ಮನಸ್ಸುಗಳು ಈಗಿನಿಂದಲೇ ಮಧ್ಯರಾತ್ರಿಯಿಂದಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಪಟಾಕಿ ಸಿಡಿಸಿ ಕನ್ನಡ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.