ಕರ್ನಾಟಕ

karnataka

ETV Bharat / state

7 ದಿನ ಪ್ರವಾಹದಲ್ಲಿದ್ದು ಸಾವನ್ನೇ ಗೆದ್ದು ಬಂದ ಗೋಕಾಕ್​ ಯುವಕ...! - ಬೆಳಗಾವಿ ಪ್ರವಾಹ

ಪ್ರವಾಹದಲ್ಲಿ ಸಿಲುಕಿದ್ದ ಯುವಕನೋರ್ವ 7 ದಿನಗಳ ನಂತರ ಈಜಿ ವಾಪಸ್​ ಬಂದಿದ್ದಾನೆ.

ಗೋಕಾಕ್​ ಯುವಕ

By

Published : Aug 8, 2019, 11:27 PM IST

ಬೆಳಗಾವಿ: ಮಹಾ ಮಳೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಅವಾಂತರ ಸೃಷ್ಟಿಸಿದೆ. ಮಳೆಯ ಪ್ರವಾಹಕ್ಕೆ ಸಿಲುಕಿದ್ದ ಯುವಕನೋರ್ವ 7 ದಿನಗಳ ನಂತರ ಅಚ್ಚರಿ ರೀತಿಯಲ್ಲಿ ಸಾವನ್ನೇ ಗೆದ್ದು ಬಂದಿದ್ದಾನೆ.

ಗೋಕಾಕ್​ ತಾಲೂಕಿನ ಯೋಗಿಕೊಳ್ಳ ಗ್ರಾಮದ ಮಾಧವಾನಂದ (23) ಎಂಬಾತ ಈ ಸಾಹಸಿ ಯುವಕ. ಈತ ಸುಮಾರು ಒಂದೂವರೆ ಕಿ.ಮೀಟರ್​ ದೂರ ಈಜಿ ಬಂದು ದಡ ಸೇರಿದ್ದಾನೆ.

ಮಾಧವಾನಂದ ಏಳು ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದ. ಈತನ ರಕ್ಷಣೆಗೆ ಎನ್​ಡಿಆರ್​ಎಫ್​ ತಂಡ ತೆರಳಿದ್ದರೂ ಸಾಧ್ಯವಾಗದೆ ವಾಪಸ್​ ಬಂದಿತ್ತು. ಸಾಹಸ ಮೆರೆದ ಯುವಕ ಕೊನೆಗೂ ಈಜಿ ದಡ ಸೇರಿದ್ದಾನೆ.

ABOUT THE AUTHOR

...view details