ಬೆಳಗಾವಿ:ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುವ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಬಳಸುವ ಪಿಪಿಇ ಕಿಟ್ಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಎಲ್ಲೆಂದರಲ್ಲಿ ಬಿಸಾಡಿರುವ ಆರೋಪ ಕೇಳಿ ಬರುತ್ತಿದೆ.
ಮಳೆ ನೀರು ತಡೆಯೋಕೆ ಪಿಪಿಇ ಕಿಟ್ ಬಳಸ್ತಾರೆ ಈ ಆಸ್ಪತ್ರೆ ಸಿಬ್ಬಂದಿ..! - belagavi hospital
ವೈದ್ಯಕೀಯ ಸಿಬ್ಬಂದಿ ಬಳಸಿ ಸೂಕ್ಷ್ಮವಾಗಿ ವಿಲೇವಾರಿ ಮಾಡಬೇಕಾದ ಪಿಪಿಇ ಕಿಟ್, ಹೆಡ್ ಕವರ್, ಮಾಸ್ಕ್ಗಳನ್ನು ನಿರ್ವಹಿಸುವಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಪಿಪಿಇ ಕಿಟ್ಗಳು
ಇಲ್ಲಿನ ಮಕ್ಕಳ ಐಸೋಲೇಷನ್ ವಾರ್ಡ್ನಲ್ಲಿ ಪಿಪಿಇ ಕಿಟ್ಗಳನ್ನು ಎಸೆಯಲಾಗಿದ್ದು, ವಾರ್ಡ್ನ ಹೊರಗೆ ವೈದ್ಯರು, ಶುಶ್ರೂಷಕರು ಬಳಸಿರುವ ಪಿಪಿಇ ಕಿಟ್ಗಳನ್ನು, ಮಾಸ್ಕ್, ಹೆಡ್ ಕವರ್, ಗ್ಲೌಸ್ಗಳನ್ನು ಎಲ್ಲೆಂದರಲ್ಲಿ ಚೆಲ್ಲಲಾಗಿದೆ. ಸ್ವಚ್ಛತೆ ಹಾಗೂ ಸುರಕ್ಷತೆಗೆ ಆದ್ಯತ ನೀಡಬೇಕಾದ ಆಸ್ಪತ್ರೆಯ ಸಿಬ್ಬಂದಿ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡುವುದರಲ್ಲಿ ವಿಫಲರಾಗಿದ್ದಾರೆ.
ಪಿಪಿಇ ಕಿಟ್ಗಳು
ಇದರ ಜೊತೆಗೆ ಕೆಲವೊಂದು ಕಡೆಗಳಲ್ಲಿ ಪಿಪಿಇ ಕಿಟ್ಗಳನ್ನು ಮಳೆ ನೀರು ಆಸ್ಪತ್ರೆಯೊಳಗೆ ಬರದಂತೆ ತಡೆಯಲು ಬಳಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.