ಕರ್ನಾಟಕ

karnataka

ETV Bharat / state

ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಕೃಷಿ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆಗೆ ಸಂಕಷ್ಟ - ಬೆಳಗಾವಿಯ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ರಾಜಕುಮಾರ್ ಟಾಕಳೆ ಕೋರ್ಟ್​ ಮೊರೆ ಹೋಗಿದ್ದರು.

belagavi-court-dismissed-anticipatory-bail-application-of-rajkumar-takale
ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಕೃಷಿ ಇಲಾಖೆಯ ಅಧಿಕಾರಿ ರಾಜಕುಮಾರ್ ಟಾಕಳೆಗೆ ಸಂಕಷ್ಟ

By

Published : Aug 4, 2022, 9:50 PM IST

ಬೆಳಗಾವಿ: ಅತ್ಯಾಚಾರ, ಗರ್ಭಪಾತ ಹಾಗೂ ದೈಹಿಕ ಹಲ್ಲೆ ಸೇರಿ 10ಕ್ಕೂ ಅಧಿಕ ಆರೋಪ ಪ್ರಕರಣಗಳನ್ನು ಎದುರಿಸುತ್ತಿರುವ ಇಲ್ಲಿನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ‌ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಬೆಳಗಾವಿಯ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅನಂತ್ ಹೆಚ್ ಈ ಆದೇಶ ಹೊರಡಿಸಿದ್ದಾರೆ.

ರಾಜಕುಮಾರ್ ‌ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ದೂರಿನಡಿ ಬೆಳಗಾವಿಯ ಎಪಿಎಂಸಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಟಾಕಳೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಜಾಗೊಂಡಿದ್ದು, ಅಧಿಕಾರಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ:ಅತ್ಯಾಚಾರ, ಗರ್ಭಪಾತ ಸೇರಿ ವಿವಿಧ ಸೆಕ್ಷನ್​ಗಳ ಅಡಿ ಟಾಕಳೆ ವಿರುದ್ಧ ನವ್ಯಶ್ರೀ ದೂರು

ದೂರು-ಪ್ರತಿದೂರು:ಕಳೆದ ಹಲವು‌ ದಿನಗಳ ಹಿಂದೆ ಚನ್ನಪಟ್ಟಣ ಮೂಲದ ನವ್ಯಶ್ರೀ ರಾವ್ ವಿರುದ್ಧ ಜುಲೈ 18ರಂದು ರಾಜಕುಮಾರ್ ಟಾಕಳೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ, ಸುಲಿಗೆ ಬ್ಲ್ಯಾಕ್​ಮೇಲ್ ಬಗ್ಗೆ ಉಲ್ಲೇಖಿಸಿದ್ದರು.

ಇದಾದ ಬಳಿಕ ಜುಲೈ 23ರಂದು ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ಪ್ರತಿ ದೂರು ನೀಡಿದ್ದರು. ನವ್ಯಶ್ರೀ ದೂರಿನಂತೆ ಅತ್ಯಾಚಾರ, ಕಿಡ್ನಾಪ್, ಗರ್ಭಪಾತ ಮಾಡಿಸಿದ್ದು, ‌ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯವಾಗಿ ನಿಂದಿಸುವುದು, ಜೀವ ಬೆದರಿಕೆ, ಗೌರವಕ್ಕೆ ಧಕ್ಕೆ ಹಾಗೂ ಖಾಸಗೀತನಕ್ಕೆ ಧಕ್ಕೆ ಹಾಗೂ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡಿರುವ ಬಗ್ಗೆ ವಿವಿಧ ಸೆಕ್ಷನ್ ಹಾಗೂ ಆ್ಯಕ್ಟ್​​ಗಳಡಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ:'50 ಲಕ್ಷಕ್ಕೆ ನವ್ಯಶ್ರೀ ಬೇಡಿಕೆಯಿಟ್ಟಿದ್ದರು, ಈಗಾಗಲೇ 5 ಲಕ್ಷ ಪಡೆದುಕೊಂಡಿದ್ದಾರೆ': ಟಾಕಳೆ

ABOUT THE AUTHOR

...view details