ಕರ್ನಾಟಕ

karnataka

ETV Bharat / state

ಎನ್​ಡಿಆರ್​ಎಫ್​​ ತಂಡದ ಸಾಹಸ... 3 ದಿನದಿಂದ ಮಳೆಯಲ್ಲೇ ಮನೆ ಮೇಲೆ ಕೂತಿದ್ದ ದಂಪತಿಯ ರಕ್ಷಣೆ! - ದಂಪತಿ ರಕ್ಷಣೆ

ಕಳೆದ ಮೂರು ದಿಗಳಿಂದ ಪ್ರವಾಹದಲ್ಲಿ ಸಿಲುಕಿದ್ದ ದಂಪತಿಯನ್ನ ರಕ್ಷಣೆ ಮಾಡುವಲ್ಲಿ ಎನ್​ಡಿಆರ್​ಎಫ್ ತಂಡ ಯಶಸ್ವಿಯಾಗಿದೆ.

ದಂಪತಿ ರಕ್ಷಣೆ

By

Published : Aug 8, 2019, 1:04 PM IST

ಬೆಳಗಾವಿ: ಕಬಲಾಪುರದಲ್ಲಿ‌ ಕಳೆದ ಮೂರು ದಿನಗಳಿಂದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ದಂಪತಿಯನ್ನ ಎನ್​ಡಿಆರ್​ಎಫ್ ತಂಡ ಬೋಟ್​ ಮೂಲಕ ರಕ್ಷಣೆ ಮಾಡಿದೆ.

ಕಬಲಾಪುರ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ತೋಟದ ಮನೆಗೆ ಹೋಗಿದ್ದ ದಂಪತಿ ನೀರಿನ ಮಧ್ಯೆ ಸಿಲುಕಿಕೊಂಡಿದ್ದರು. ರೈತ ಕಾಡಪ್ಪ, ಪತ್ನಿ ರತ್ನವ್ವ ಜಲಾವೃತವಾಗಿರುವ ಮನೆಯ ಮೇಲೆ ಏರಿ ಕುಳಿತಿದ್ದರು.

ಬೆಳಗಾವಿ ನಗರದ ಸಂಪೂರ್ಣ ನೀರು ಹರಿದು ಹೋಗುವ ಬಳ್ಳಾರಿ ನಾಲಾ ಈ ತೋಟದ ಮನೆಯನ್ನು ಸುತ್ತುವರೆದಿತ್ತು. ಎನ್​ಡಿಆರ್​ಎಫ್, ಅಗ್ನಿಶಾಮಕ ದಳ ನೀರಿನ ಸೆಳೆತ ಕಡಿಮೆಯಾಗುವವರೆಗೂ ನಾವು ಏನೂ ಮಾಡಲು ಆಗುವುದಿಲ್ಲ ಎಂದಿದ್ದರು.

ಹೀಗಾಗಿ ಕೇಂದ್ರದಿಂದ ಹೆಲಿಕಾಪ್ಟರ್​ ನೆರವಿಗಾಗಿ ಸಿಎಂ ಬಿ.ಎಸ್.ಎಡಿಯೂರಪ್ಪ ಮನವಿ ಮಾಡಿದ್ದರು. ಸಂಜೆಯೊಳಗಾಗಿ ರಕ್ಷಣೆ ಮಾಡುವುದಾಗಿ ತಿಳಿಸಿದ್ದರು. ಆದರೆ ಸಾಹಸ ಮೆರೆದ ಎನ್​​ಡಿಆರ್​ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸ್​ ಇಲಾಖೆ, ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ದಂಪತಿಯನ್ನ ರಕ್ಷಣೆ ಮಾಡಲಾಗಿದೆ.

ಮೂರು ದಿನದಿಂದ ಊಟ, ಉಪಹಾರವಿಲ್ಲದೇ ನೀರಿನ ಮಧ್ಯೆ ಸಿಲುಕಿ ಪರದಾಟ ನಡೆಸಿದ್ದ ದಂಪತಿಯನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ABOUT THE AUTHOR

...view details