ಬೆಳಗಾವಿ:ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಕಾರು ಪಾರ್ಕಿಂಗ್ ಮತ್ತು ದೇವಸ್ಥಾನ ಜಾಗದ ವಿಚಾರಕ್ಕೆ ನಡೆದ ಘರ್ಷಣೆಯಲ್ಲಿ ಕೊಲೆಗೀಡಾದ ಸತೀಶ್ ಪಾಟೀಲ್ ಅಂತ್ಯಕ್ರಿಯೆ ಗ್ರಾಮದ ಹೊರವಲಯದ ಸ್ಮಶಾನದಲ್ಲಿ ನಡೆದಿದೆ. ಈ ವೇಳೆ ತಾಯಿ ನಳಿನಿ ಪಾಟೀಲ್, ಪತ್ನಿ ಸ್ನೇಹಾ ಪಾಟೀಲ್ ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಶುಕ್ರವಾರ ರಾತ್ರಿ ಸತೀಶ್ ಪಾಟೀಲ್ ಹತ್ಯೆಯಾಗಿತ್ತಲ್ಲದೆ, ಬಳಿಕ ಗ್ರಾಮದಲ್ಲಿ ಹಿಂಸಾಚಾರ ನಡೆದು ಹತ್ತಕ್ಕೂ ಹೆಚ್ಚು ವಾಹನಗಳು, ಮೇವಿನ ಬಣವೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಸುದ್ದಿ ತಿಳಿದ ಪೊಲೀಸರು ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದರು. ಈ ಕೊಲೆ ಪ್ರಕರಣದಲ್ಲಿ ಈವರೆಗೆ 7 ಜನ ಆರೋಪಿಗಳು ಹಾಗೂ ಬೆಂಕಿ, ದೊಂಬಿ ಪ್ರಕರಣ ಸಂಬಂಧ 19 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.