ಕರ್ನಾಟಕ

karnataka

ETV Bharat / state

ಬೆಳಗಾವಿ: ಮಳೆಗೆ 2 ದಿನ ಶಾಲೆಗೆ ರಜೆ, ಮನೆ ಗೋಡೆ ಕುಸಿದು ಬಾಲಕ ಸಾವು - ಬೆಳಗಾವಿ ಶಾಲೆಗಳಿಗೆ ಎರಡು ದಿನ ರಜೆ

ಬೆಳಗಾವಿಯಲ್ಲಿ ಭಾರಿ ಮಳೆಗೆ ಗೋಡೆ ಕುಸಿದು ಬಾಲಕ ಮೃತಪಟ್ಟಿದ್ದಾನೆ. ಜಿಲ್ಲೆಯ ಎರಡು ತಾಲೂಕುಗಳಲ್ಲಿ ಇಂದಿನಿಂದ ಎರಡು ದಿನ ಶಾಲೆಗೆ ರಜೆ ನೀಡಲಾಗಿದೆ.

belagavi-boy-died-as-wall-collapsed-in-khanapura
ಬೆಳಗಾವಿ: ಮಳೆ ಹಿನ್ನೆಲೆ 2 ದಿನ ಶಾಲೆಗೆ ರಜೆ, ಮನೆ ಗೋಡೆ ಕುಸಿದು ಬಾಲಕ ಸಾವು

By

Published : Jul 15, 2022, 8:11 AM IST

ಬೆಳಗಾವಿ:ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಖಾನಾಪುರದಲ್ಲಿ ಜರುಗಿದೆ. ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚುಂಚವಾಡ ಗ್ರಾಮದ ಅನಂತು ಪಾಶೆಟ್ಟಿ (15) ಎಂಬಾತನೆ ಮೃತ ಬಾಲಕನಾಗಿದ್ದಾನೆ.

ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕೊಟ್ಟಿಗೆಯಲ್ಲಿರುವ ದನಕರುಗಳಿಗೆ ಮೇವು ಹಾಕಲು ಹೋದಾಗ ಮನೆ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ‌ ಕುರಿತು ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಶಾಲೆಗಳಿಗೆ ಎರಡು ದಿನ ರಜೆ:ಭಾರಿ ಮಳೆ ಸುರಿಯುತ್ತಿದ್ದು ಬೆಳಗಾವಿ ಮತ್ತು ಖಾನಾಪೂರ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದಿನಿಂದ ಎರಡು ದಿನ(ಜು.15, 16) ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ. ಕಳೆದ ಹದಿನೈದು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆ ಆಗುತ್ತಿದ್ದು, ಶೀತ ವಾತಾವರಣವಿದೆ.

ಇದನ್ನೂ ಓದಿ:ತನಗೆ ಗಂಡು ಮಗು ಆಗಲಿ ಎಂದು ದೇವಿ ಬಳಿ ಹರಕೆ: ಮೇಕೆ ಮೇಯಿಸುತ್ತಿದ್ದ ಯುವಕನ ಬಲಿ ಕೊಟ್ಟ ಕಟುಕ!

ABOUT THE AUTHOR

...view details