ಪಿಪಿಇ ಕಿಟ್ ಧರಿಸಿ ಮತಕೇಂದ್ರಕ್ಕೆ ಆಗಮಿಸಿದ ಕೊರೊನಾ ಸೋಂಕಿತ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಮತಚಲಾಯಿಸಿದ್ದಾರೆ. ಇನ್ನೊಂದೆಡೆ ರಮೇಶ್ ಜಾರಕಿಹೊಳಿ ಪುತ್ರ ಅಮರ್ನಾಥ್ ಜಾರಕಿಹೊಳಿ ಜಾರಕಿಹೊಳಿ ಇಲ್ಲಿನ ಗೋಕಾಕ್ ಕ್ಷೇತ್ರದಲ್ಲಿ ಪಿಪಿಇ ಕಿಟ್ ಧರಿಸಿ ಮತಚಲಾಯಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಸಹೋದರ ಲಖನ್ ಜಾರಕಿಹೊಳಿ ಸಹ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಉಪಚುನಾವಣೆ LIVE UPDATES: ಬೈ ಎಲೆಕ್ಷನ್ನಲ್ಲಿ ನೀರಸ ಮತದಾನ... ಮನೆಯಿಂದ ಹೊರ ಬಾರದ ಜನ - ಉಪ ಚುನಾವಣೆ ಮತದಾನ
19:07 April 17
ಶೇ.46.70 ರಷ್ಟು ಮತದಾನ
18:37 April 17
ಶೇ.46.70 ರಷ್ಟು ಮತದಾನ
ಸಂಜೆ 5ರವರೆಗೆ ಶೇ.46.07 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಡಾ.ಹರೀಶಕುಮಾರ್ ಮಾಹಿತಿ ನೀಡಿದ್ದಾರೆ.
ಅರಬಾಂವಿ ಶೇ.43.39
ಗೋಕಾಕ್ ಶೇ.50.55
ಬೆಳಗಾವಿ ಉತ್ತರ ಶೇ. 41.57
ಬೆಳಗಾವಿ ದಕ್ಷಿಣ ಶೇ.42.53
ಬೆಳಗಾವಿ ಗ್ರಾಮೀಣ ಶೇ.55.15
ಬೈಲಹೊಂಗಲ ಶೇ. 46.15
ಸವದತ್ತಿ ಶೇ. 47.05
ರಾಮದುರ್ಗ ಶೇ. 46.89
16:41 April 17
ಬೆಳಗಾವಿ ಲೋಕಸಭಾ ಉಪಕದನ: ಈವರೆಗೆ ಶೇ. 36.97ರಷ್ಟು ಮತದಾನ
ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಈವರೆಗೆ ಒಟ್ಟು ಶೇ. 36.97ರಷ್ಟು ಮತದಾನವಾಗಿದೆ. ಇದರ ಜೊತೆ ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಈವರೆಗೆ ಶೇ.37.73ರಷ್ಟು ಮತದಾನವಾಗಿದ್ದರೆ, ಇತ್ತ ಮಸ್ಕಿ ಕ್ಷೇತ್ರದಲ್ಲಿ ಶೇ. 62ರಷ್ಟು ಮತದಾನವಾಗಿದೆ.
15:33 April 17
ಮಧ್ಯಾಹ್ನ 3ರವರೆಗೆ ಶೇ.33.55 ರಷ್ಟು ಮತದಾನ
ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಈವರೆಗೆ ಒಟ್ಟು ಶೇ. 33.55ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಡಾ.ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
- ಅರಂಬಾವಿಯಲ್ಲಿ ಶೇ.28.08
- ಗೋಕಾಕ್ ಶೇ.42.31
- ಬೆಳಗಾವಿ ಉತ್ತರ ಶೇ. 32.5
- ಬೆಳಗಾವಿ ದಕ್ಷಿಣ ಶೇ.31.95
- ಬೆಳಗಾವಿ ಗ್ರಾಮೀಣ ಶೇ.52.74
- ಬೈಲಹೊಂಗಲ ಶೇ. 33.45
- ಸವದತ್ತಿ ಶೇ. 36
- ರಾಮದುರ್ಗ ಶೇ. 25.03
14:21 April 17
ಮತ ಹಾಕುವ ದೃಶ್ಯ ಮೊಬೈಲ್ನಲ್ಲಿ ಸೆರೆ
ಮಸ್ಕಿ: ಉಪಚುನಾವಣೆಯಲ್ಲಿ ಮತದಾರನೋರ್ವ ತಾನು ಮತ ಹಾಕಿರುವ ದೃಶ್ಯವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿರುವ ಘಟನೆ ವಟಗಲ್ ಗ್ರಾಮದ ಮತಗಟ್ಟೆಯಲ್ಲಿ ನಡೆದಿದೆ.
ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ್ಗೆ ಮತ ಹಾಕುವುದನ್ನು ವಿಡಿಯೋ ಮಾಡಿಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎನ್ನಲಾಗಿದೆ.
14:16 April 17
ಅಂಚೆ ಮೂಲಕ ಮತದಾನ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ
- ಅಂಚೆ ಮೂಲಕ ಮತದಾನ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ
- ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ನಲ್ಲಿರುವ ರಮೇಶ್ ಜಾರಕಿಹೊಳಿ
- ಸೋಂಕಿತರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿರುವ ಚುನಾವಣಾ ಆಯೋಗ
13:17 April 17
ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರವಿರುವ ಚೀಟಿ ಹಂಚಿಕೆ ಆರೋಪ:
ರಾಯಚೂರು: ಮಸ್ಕಿಯ ಹಾಲಾಪುರ ಗ್ರಾಮದ ಮತಗಟ್ಟೆ ಕೇಂದ್ರ ಬಳಿ ಜನರು ಗುಂಪಾಗಿರುವುದನ್ನು ಕಂಡು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಗರಂ ಆಗಿದ್ದಾರೆ.
ಮತಗಟ್ಟೆ ಬಳಿ ಕಾಂಗ್ರೆಸ್ ಅಭ್ಯರ್ಥಿ ಭಾವ ಚಿತ್ರವಿರುವ ಮತದಾರರ ಚೀಟಿ ಹಂಚಲಾಗುತ್ತಿತ್ತು ಎನ್ನುವ ಆರೋಪ ಕೇಳಿಬಂದಿದ್ದು, ಮತಗಟ್ಟೆಗೆ ಆಗಮಿಸುತ್ತಿದ್ದ ಮತದಾರರ ಬಳಿ ಕಾಂಗ್ರೆಸ್ ಚಿಹ್ನೆಯಿರುವ ಮತದಾರರ ಚೀಟಿ ಪತ್ತೆಯಾಗಿದೆ. ಈ ಕುರಿತು ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾದೆ ಎನ್ನಲಾಗಿದೆ.
13:03 April 17
ಮತದಾನ ಮರೆತು ಲಸಿಕೆ ಹಾಕಿಸಿಕೊಳ್ಳಲು ಮುಂದಾದ ಜನ
ಗೋಕಾಕ್: ಬೆಳಗಾವಿ ಲೋಕಸಭೆ ಉಪಚುನಾವಣೆ ಮತದಾನ ಮರೆತು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಜನ ಆಸ್ಪತ್ರೆ ಕಡೆ ಮುಖ ಮಾಡಿದ್ದಾರೆ.
ಗೋಕಾಕ್ ಕ್ಷೇತ್ರದಲ್ಲಿ ಬಹುತೇಕ ಮತಗಟ್ಟೆಗಳು ಖಾಲಿ ಹೊಡೆಯುತ್ತಿದ್ದು, ಜನರು ಜೀವಕ್ಕೆ ಹೆದರಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ.
ಇನ್ನು ಲಸಿಕೆ ಹಾಕಿಸಿಕೊಳ್ಳುವ ವೇಳೆ ಸಾಮಾಜಿಕ ಅಂತರವನ್ನು ಮರೆತಿದ್ದಾರೆ.
12:38 April 17
ಪೊಲೀಸರೊಂದಿಗೆ ಕೈ ಕಾರ್ಯಕರ್ತೆ ವಾಗ್ವಾದ:
ಮಸ್ಕಿ:ಕುರುಕುಂದಾ ಗ್ರಾಮದಲ್ಲಿ ಪೊಲೀಸರೊಂದಿಗೆ ಕಾಂಗ್ರೆಸ್ ಕಾರ್ಯಕರ್ತೆ ವಾಗ್ವಾದ ನಡೆಸಿರುವ ಪ್ರಸಂಗ ನಡೆಯಿತು.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕುರುಕುಂದಾ ಗ್ರಾಮದ ಮತಗಟ್ಟೆ ಹತ್ತಿರ ಬಿಜೆಪಿ ಕಾರ್ಯಕರ್ತರನ್ನು ಬಿಡುತ್ತಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತೆ ಪದ್ಮಾವತಿ ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾರ್ಯಕರ್ತರನ್ನು ದೂರ ಕಳಿಸಿ, ಬಿಜೆಪಿ ಕಾರ್ಯಕರ್ತರಿಗೆ ಮತಗಟ್ಟೆ ಹತ್ತಿರ ಹೋಗಲು ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
12:30 April 17
ಬೆಳಗಾವಿ:ಮತದಾನ ಮಾಡುತ್ತಿರುವ ವಿಡಿಯೋ ವೈರಲ್ ಮಾಡಿದ ಪುಂಡರು
ಎಂಇಎಸ್ ಅಭ್ಯರ್ಥಿಗೆ ಮತ ಹಾಕುವ ವಿಡಿಯೋ ವೈರಲ್
ಎಂಇಎಸ್ ಅಭ್ಯರ್ಥಿ ಶುಭಂ ಶೇಳಕೆಗೆ ಮತದಾನ ಮಾಡ್ತಿರುವ ವಿಡಿಯೋ ವೈರಲ್
12:30 April 17
ಅಭ್ಯರ್ಥಿಗಳಿಂದ ಮತದಾನ
ಬೀದರ್: ಬಸವಕಲ್ಯಾಣ ಉಪಚುನಾವಣೆ ಕಣದಲ್ಲಿರುವ 12 ಜನ ಅಭ್ಯರ್ಥಿಗಳು ಮತದಾನ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ರೈತ ಭವನದಲ್ಲಿ ಮತದಾನದ ಹಕ್ಕು ಚಲಾಯಿಸಿದರೆ, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ನಗರದ ತ್ರಿಪುರಾಂತದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ ನಾರಾಯಣರಾವ್ ಅವರು ತಮ್ಮ ಮಗ ಗೌತಮರೊಂದಿಗೆ ತ್ರಿಪುರಾಂತ ಭಾಗದ ರೇಷ್ಮೆ ಇಲಾಖೆ ಕಚೇರಿ ಬಳಿಯಿರುವ ಮತಗಟ್ಟೆಗೆ ಬಂದು ವೋಟ್ ಹಾಕಿದರು. ಅಲ್ಲದೆ ಜೆಡಿಎಸ್ ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಅವರು ಬಸವಕಲ್ಯಾಣ ನಗರದ ಹಜರತ್ ದರ್ಗಾ ಬಳಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
12:03 April 17
ಮತ ಚಲಾಯಿಸಿದ ರಮೇಶ್ ಜಾರಕಿಹೊಳಿ ಪುತ್ರ
ಗೋಕಾಕ್: ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ ಅವರು ಪತ್ನಿ ಅಂಬಿಕಾ ಜೊತೆ ಬಂದು ಮತ ಚಲಾಯಿಸಿದರು.
ಮತಗಟ್ಟೆ ಸಂಖ್ಯೆ 135 ಮತದಾನ ಮಾಡಿದ ಸಂತೋಷ, ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
11:53 April 17
ಬಸವಕಲ್ಯಾಣ ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ 11 ಗಂಟೆವರೆಗೆ ಶೇ 19.48 ರಷ್ಟು ಮತದಾನವಾಗಿದೆ.
ಬೆಳಗಾವಿ ಕ್ಷೇತ್ರದಲ್ಲಿ ಬೆಳಗ್ಗೆ 11 ರವರೆಗೆ 13.13 % ರಷ್ಟು ವೋಟಿಂಗ್ ಆಗಿದೆ ಎಂದು ಚುನಾವಣಾಧಿಕಾರಿ ಡಾ. ಹರೀಶ್ ಕುಮಾರ್ ಮಾಹಿತಿ ನೀಡಿದರು.
11 ರ ವರೆಗಿನ ಶೇಕಡಾವಾರು ವೋಟಿಂಗ್:
- ಅರಬಾವಿ- 9.23%
- ಗೋಕಾಕ್ - 18.17%
- ಬೆಳಗಾವಿ ಉತ್ತರ- 14.13%
- ಬೆಳಗಾವಿ ದಕ್ಷಿಣ - 12.22%
- ಬೆಳಗಾವಿ ಗ್ರಾಮೀಣ - 19.48 %
- ಬೈಲಹೊಂಗಲ - 12.59%
- ಸವದತ್ತಿ - 8.16 %
- ರಾಮದುರ್ಗ- 9.19% ಮತದಾನವಾಗಿದೆ.
11:45 April 17
ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 11 ರವರೆಗೆ ಶೇ 19.30 ರಷ್ಟು ಮತದಾನವಾಗಿದೆ.
11:44 April 17
ಸವದತ್ತಿ ತಾಲೂಕಿನ ಬೈಲಹೊಂಗಲ ಮತ ಕ್ಷೇತ್ರದ ಹೊಸೂರ ಸರ್ಕಾರಿ ಶಾಲೆಯ ಬೂತ್ನಲ್ಲಿ ಉಳವಿ ಪೀಠದ ಪೂಜ್ಯ ಶಿವಪ್ರಕಾಶ ಸ್ವಾಮೀಜಿ ಮತದಾನ ಮಾಡಿದರು.
11:16 April 17
ನಾವು ಮೂರಕ್ಕೆ ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ: ವಿ.ಸೋಮಣ್ಣ
ಮೈಸೂರು: ಅನಿರೀಕ್ಷಿತವಾಗಿ ಬಂದ ಉಪ ಚುನಾವಣೆ ಇದು, ನಾವು ಮೂರಕ್ಕೆ ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ವಸತಿ ಸಚಿವ ಸೋಮಣ್ಣ ಮೈಸೂರಿನಲ್ಲಿ ಹೇಳಿದರು.
ಇಂದು ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ವಸತಿ ಸಚಿವ ವಿ.ಸೋಮಣ್ಣ ಮಾಧ್ಯಮದ ಜೊತೆ ಮಾತನಾಡಿ, ಅನಿರೀಕ್ಷಿತವಾಗಿ ಬಂದ ಬೆಳಗಾವಿ, ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆವನ್ನು ನಾವು ಗೆಲ್ಲುತ್ತೇವೆ. ಹಣ ಹಂಚಿಕೆ ಮಾಡಿ ಉಪಚುನಾವಣೆಯನ್ನು ಬಿಜೆಪಿಯವರು ಗೆಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್ನವರು ಪ್ರಚಾರಕ್ಕಾಗಿ ಹೇಳುತ್ತಿದ್ದಾರೆ. ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುವ ಕಾಲ ಈಗ ಇಲ್ಲ ಎಂದರು.
10:28 April 17
ಗೋಕಾಕ್ನಲ್ಲಿ ಮತದಾನ ಮಾಡಲು ಹಿಂದೇಟು
ಗೋಕಾಕ್: ಕಳೆದ ಎರಡ್ಮೂರು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಗೋಕಾಕ್ನಲ್ಲಿ ಮತದಾನ ಮಾಡಲು ಮತದಾರರು ಹಿಂದೇಟು ಹಾಕುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ಸರ್ಕಾರಿ ಮಾದರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ 100 ಹಾಗೂ 101 ರಲ್ಲಿ ಮತದಾನ ಮಾಡಲು ಯಾರು ಮುಂದಾಗುತ್ತಿಲ್ಲ. ಹೀಗಾಗಿ ಮತಗಟ್ಟೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೆನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡುವುದರ ಮೂಲಕ ಮತದಾರರನ್ನು ಮತಗಟ್ಟೆಗೆ ಕಳಿಸಲಾಗುತ್ತಿದೆ.
10:27 April 17
ಮತ ಚಲಾಯಿಸುವಂತೆ ಸಿಎಂ ಕರೆ:
ಬೆಂಗಳೂರು: ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ತಪ್ಪದೇ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.
ಟ್ವೀಟ್ ಮೂಲಕ ಕರೆ ನೀಡಿರುವ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಆತ್ಮೀಯ ಮತದಾರ ಬಂಧುಗಳೇ, ಇಂದು ತಪ್ಪದೇ ಮತ ಚಲಾಯಿಸಿ. ಪ್ರಜಾಪ್ರಭುತ್ವದ ಆಧಾರವೇ ಮತದಾನ, ಅದು ನಮ್ಮ ಹಕ್ಕೂ ಕೂಡ ಹೌದು, ಕರ್ತವ್ಯವೂ ಹೌದು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ನಿಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿ, ಪ್ರಜಾತಂತ್ರವನ್ನು ಬಲಪಡಿಸಿ ಎಂದು ಮನವಿ ಮಾಡಿದ್ದಾರೆ.
10:09 April 17
ಬೆಳಗಾವಿ:
- ಮತ ಹಾಕಿದ ಎಂಇಎಸ್ ಅಭ್ಯರ್ಥಿ ಶುಭಂ ಶಳೆಕೆ
- ಎಂಇಎಸ್ ಅಭ್ಯರ್ಥಿ ಶುಭಂ ಶಳೆಕೆ ಅವರಿಂದ ಮತದಾನ
- ಮಾಧ್ವ ನಗರದಲ್ಲಿರುವ 12 ನೇ ನಂಬರ್ ಮರಾಠಿ ಶಾಲೆಯ 109 ನೇ ಮತಗಟ್ಟೆಯಲ್ಲಿ ವೋಟಿಂಗ್
09:55 April 17
ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು:
- ಬೆಳಗಾವಿ ಲೋಕಸಭಾ ಕ್ಷೇತ್ರದ ಚಿಕ್ಕತಡಸಿ, ಹೀರೆತಡಸಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
- ಮತದಾನ ಬಹಿಷ್ಕರಿಸಿದ ಬೆಳಗಾವಿ ಜಿಲ್ಲೆ ರಾಮದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳು
- ನೆರೆ ಪ್ರವಾಹದಿಂದ ತತ್ತರಿಸಿರುವ ಚಿಕ್ಕತಡಸಿ, ಹೀರೆತಡಸಿ ಗ್ರಾಮಸ್ಥರು
- ಮಲಪ್ರಭಾ ನದಿ ತಟದಲ್ಲಿರುವ ಚಿಕ್ಕತಡಸಿ, ಹೀರೆತಡಸಿ ಗ್ರಾಮಗಳು
- ಗ್ರಾಮ ಸ್ಥಳಾಂತರ ಮಾಡುವಂತೆ ಸರ್ಕಾರಕ್ಕೆ ಒತ್ತಾಯ
- ಗ್ರಾಮಸ್ಥರ ಮನವಿಗೆ ಸರ್ಕಾರ ಸ್ಪಂದಿಸದ ಹಿನ್ನಲೆ ಚುನಾವಣೆಗೆ ಬಹಿಷ್ಕಾರ.
- ಗ್ರಾಮಗಳ ಸ್ಥಳಾಂತರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
09:37 April 17
ಬೆಳಗ್ಗೆ 9ರ ವರೆಗಿನ ಶೇಕಡಾವಾರು ವೋಟಿಂಗ್:
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 9 ರವರೆಗೆ ಶೇ 11.23ರಷ್ಟು ಮತದಾನವಾಗಿದೆ.
ಬಸವಕಲ್ಯಾಣ ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ 9 ಗಂಟೆವರೆಗೆ ಶೇ 7.46 ರಷ್ಟು ಮತದಾನವಾಗಿದೆ.
ಬೆಳಗಾವಿ ಕ್ಷೇತ್ರದಲ್ಲಿ ಬೆಳಗ್ಗೆ 9 ರವರೆಗೆ 5.47% ರಷ್ಟು ವೋಟಿಂಗ್ ಆಗಿದೆ ಎಂದು ಚುನಾವಣಾಧಿಕಾರಿ ಡಾ. ಹರೀಶ್ ಕುಮಾರ್ ಮಾಹಿತಿ ನೀಡಿದರು.
ಬೆಳಗ್ಗೆ 9 ಗಂಟೆವರೆಗಿನ ಶೇಕಡಾವಾರು ಮತದಾನ:
- ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ-2.69 %
- ಬೆಳಗಾವಿ ದಕ್ಷಿಣ-2.60%
- ಬೆಳಗಾವಿ ಗ್ರಾಮೀಣ-% 9.00%
- ಬೈಲಹೊಂಗಲ - 5.5%
- ಸವದತ್ತಿ- 6.89%
- ರಾಮದುರ್ಗ - 6.46%
- ಗೋಕಾಕ್- 5.84%
- ಅರಭಾವಿ -3.12% ಮತದಾನವಾಗಿದೆ.
09:25 April 17
ಬಿರುಸಿನಿಂದ ಸಾಗಿದ ಮತದಾನ:
ಬೀದರ್: ಬಸವಕಲ್ಯಾಣದಲ್ಲಿ ಮತದಾನ ಆರಂಭವಾಗಿದೆ. ಜೆಡಿಎಸ್ ಅಭ್ಯರ್ಥಿ ಸೈಯದ್ ಖಾದ್ರಿ, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಹಾಗೂ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಸೇರಿದಂತೆ ಒಟ್ಟು 12 ಜನ ಅಭ್ಯರ್ಥಿಗಳು ಮತದಾನ ಮಾಡಿದರು.
ಬೆಳೆಗ್ಗೆ 7 ಗಂಟೆಯಿಂದಲೇ ಮತದಾನ ಪ್ರಾರಂಭವಾಗಿದೆ. ಮತಗಟ್ಟೆ ಕೇಂದ್ರದತ್ತ ಮತದಾರರು ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಸಹ ಬಿರುಸಿನಿಂದ ಮತದಾನ ಸಾಗುತ್ತಿದೆ.
ಒಟ್ಟು 326 ಮತಗಟ್ಟೆಗಳಲ್ಲಿ 2,39,782 ಜನ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದು, ಎರಡು ಸಖಿ ಮತಗಟ್ಟೆಗಳು, 172 ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ.
08:50 April 17
ಮನೆ ಮಹಡಿಯಿಂದ ಮತದಾನ ವೀಕ್ಷಿಸಿದ ಪ್ರತಾಪಗೌಡ ಪಾಟೀಲ್
ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ತಮ್ಮ ಮನೆಯ ಬಳಿಯಿರುವ ಮತಗಟ್ಟೆಯಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯನ್ನ ಮನೆಯ ಮಹಡಿಯಿಂದಲೇ ವೀಕ್ಷಿಸಿದರು.
ಕಳೆದ 11ನೇ ತಾರೀಕಿನಂದು ಪ್ರತಾಪಗೌಡ ಪಾಟೀಲ್ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
08:21 April 17
ಬೆಳಗಾವಿ:
- ಉತ್ಸಾಹದಿಂದ ಮತದಾನ ಮಾಡಿದ ವೃದ್ಧ ದಂಪತಿ
- ಬೆಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ವೃದ್ಧ
- 78 ವರ್ಷದ ಗಜಾನನ ಹೆಗಡೆ, 71 ವರ್ಷದ ಸಾವಿತ್ರಿ ಹೆಗಡೆಯಿಂದ ಮತದಾನ
- ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಮತಗಟ್ಟೆ 2 ರಲ್ಲಿ ಹಕ್ಕು ಚಲಾಯಿಸಿದ ವೃದ್ಧ ದಂಪತಿ
- ವ್ಹೀಲ್ ಚೇರ್ ಸಹಾಯದಿಂದ ಮತಗಟ್ಟೆಗೆ ಬಂದ ವೃದ್ಧ
- ವೃದ್ಧನಿಗೆ ಕರ್ತವ್ಯ ನಿರತ ಪೊಲೀಸ್ ಪೇದೆಯಿಂದ ಸಹಾಯ
08:14 April 17
ಬೆಳಗಾವಿ: ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಇಂದು ಬೆಳಗ್ಗೆ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಈ ವೇಳೆ ಕೋವಿಡ್-19 ಮಾರ್ಗಸೂಚಿ ಪಾಲನೆಯ ಕುರಿತು ಪರಿಶೀಲನೆ ನಡೆಸಿದರು.
08:13 April 17
ಮತದಾನಕ್ಕೂ ಮುನ್ನ ಟೆಂಪಲ್ ರನ್
- ಮತದಾನಕ್ಕೂ ಮುನ್ನ ಟೆಂಪಲ್ ರನ್ ಪ್ರಾರಂಭಿಸಿದ ಕೈ ಅಭ್ಯರ್ಥಿ
- ಬಸನಗೌಡ ತುರುವಿಹಾಳರಿಂದ ಟೆಂಪಲ್ ರನ್
- ದೇವರ ದರ್ಶನ ನಂತರ ಮತದಾನ ಮಾಡಿದ ಬಸನಗೌಡ
- ಮತಗಟ್ಟೆ ಸಂಖ್ಯೆ 217 ರಲ್ಲಿ ಮತ ಹಾಕಿದ ಬಸನಗೌಡ
- ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಕುಟುಂಬಸ್ಥರಿಂದ ಟೆಂಪಲ್ ರನ್
- ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಮೂರು ಜನ ಮಕ್ಕಳು, ಇಬ್ಬರು ಸೊಸೆಯರು
- ಮತಗಟ್ಟೆ ಸಂಖ್ಯೆ 88 ರಲ್ಲಿ ಹಕ್ಕು ಚಲಾಯಿಸಿದ ಪ್ರತಾಪಗೌಡ ಪಾಟೀಲ್
08:13 April 17
- ಮತದಾನ ಮಾಡಿದ ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕ ಅಭಯ ಪಾಟೀಲ್
- ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಅಭಯ ಪಾಟೀಲ್
- ಶಹಾಪುರದ 8 ನೇ ಸರ್ಕಾರಿ ಶಾಲೆಯ 2ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಪಾಟೀಲ್
07:39 April 17
- ಮಸ್ಕಿಯಲ್ಲಿ ಮತಗಟ್ಟೆ ಸಂಖ್ಯೆ 88ರಲ್ಲಿ ಸರತಿ ಸಾಲಿನಲ್ಲಿ ನಿಂತು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಕುಟುಂಬದವರಿಂದ ಮತದಾನ
- ಪ್ರತಾಪ್ ಗೌಡ ಪಾಟೀಲ್ ಪುತ್ರಿ ಪ್ರೀತಿ ಹಾಗೂ ಪತ್ನಿ ಪದ್ಮಾವತಿಯಿಂದ ಮತದಾನ
- ಕೊರೊನಾ ಹಿನ್ನೆಲೆ, ಇಂದು ಸಂಜೆ 6ರಿಂದ 7 ಗಂಟೆಯ ಸಮಯದಲ್ಲಿ ಮತದಾನ ಮಾಡಲಿರುವ ಪ್ರತಾಪ್ ಗೌಡ ಪಾಟೀಲ್
- ಪ್ರತಾಪ್ ಗೌಡ ಪಾಟೀಲ್ ಮನೆ ಮುಂದೆ ಇರುವ ಮತಗಟ್ಟೆ ಸಂಖ್ಯೆ 88
- ಮನೆಯ ಮಹಡಿ ಮೇಲಿಂದ ಮತಗಟ್ಟೆ ವೀಕ್ಷಣೆ ಮಾಡಿದ ಪ್ರತಾಪ್ ಗೌಡ ಪಾಟೀಲ್
07:24 April 17
ಮಸ್ಕಿಯಲ್ಲಿ ಮತದಾನ ಆರಂಭ
ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ಆರಂಭವಾಗಿದೆ. ಚುನಾವಣೆ ಅಖಾಡದಲ್ಲಿ ಒಟ್ಟು 8 ಅಭ್ಯರ್ಥಿಗಳಿದ್ದು ಮತದಾನದ ವೇಳೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ.
ಮತದಾನಕ್ಕಾಗಿ ಒಟ್ಟು 305 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. 62-ಸೂಕ್ಷ್ಮ, 7-ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತದಾನ ಪ್ರಕ್ರಿಯೆಗಾಗಿ ಒಟ್ಟು 2,309 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಟ್ಟು 2,06,429 ಮತದಾರರಿದ್ದು, 1,01,340 ಪುರುಷರು ಹಾಗೂ 1,05,076 ಮಹಿಳೆಯರು ಮತ್ತು 13 ಇತರೆ ಮತದಾರರಿದ್ದಾರೆ.
ಮಸ್ಕಿ ಪಟ್ಟಣ ಮತ್ತು ತುರುವಿಹಾಳ ಪಟ್ಟಣದಲ್ಲಿ ಸಖಿ ಮತಗಟ್ಟೆ ತೆರಯಲಾಗಿದೆ. 153 ವೆಬ್ ಕಾಸ್ಟಿಂಗ್ ಮತಗಟ್ಟೆಗಳಿವೆ. ಭದ್ರತೆಗಾಗಿ ಒಟ್ಟು 739 ಪೊಲೀಸರು, 71 ಎಎಸ್ಐ, 25 ಪಿಎಸ್ಐ, 7 ಸಿಪಿಐಗಳು, 3 ಡಿವೈಎಸ್ಪಿ ಸೇರಿದಂತೆ ಒಟ್ಟು 847 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಮೂರು ಸಿಆರ್ಪಿಎಫ್, ಹೆಚ್ಚುವರಿಯಾಗಿ ಕೇಂದ್ರ ಮೀಸಲು ಪಡೆ, ಕೆಎಸ್ಆರ್ಪಿ ತಂಡಗಳನ್ನು ಚುನಾವಣಾ ಸ್ಥಳದಲ್ಲಿ ನಿಯೋಜನೆ ಮಾಡಲಾದೆ. ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಮತದಾನಕ್ಕೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
07:18 April 17
ಬೆಳಗಾವಿಯಲ್ಲಿ ಮತದಾನ ಪ್ರಕ್ರಿಯೆ ಆರಂಭ:
ಬೆಳಗಾವಿ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಮತದಾನಕ್ಕೆ ಆಗಮಿಸಿದ್ದು, ವಿಶ್ವೇಶ್ವರಯ್ಯ ನಗರದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆ ಎರಡರಲ್ಲಿ ಮತದಾನ ಮಾಡಿದ್ದಾರೆ.
ಮತಗಟ್ಟೆಗೆ ಆಗಮಿಸುತ್ತಿದ್ದಂತೆ ಮತದಾರರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮಂಗಳಾ ಅವರು, ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಈ ವೇಳೆ ಮಂಗಳಾ ಅಂಗಡಿಗೆ ಪುತ್ರಿಯರಾದ ಸ್ಪೂರ್ತಿ, ಶ್ರದ್ಧಾ ಸಾಥ್ ನೀಡಿದರು.
06:35 April 17
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಈ ಉಪ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ಬೆಳಗಾವಿ ಕ್ಷೇತ್ರ:
- ಬಿಜೆಪಿ - ಮಂಗಳಾ ಅಂಗಡಿ
- ಕಾಂಗ್ರೆಸ್ - ಸತೀಶ್ ಜಾರಕಿಹೊಳಿ
ಮಸ್ಕಿ ಕ್ಷೇತ್ರ:
- ಬಿಜೆಪಿ - ಪ್ರತಾಪಗೌಡ ಪಾಟೀಲ್
- ಕಾಂಗ್ರೆಸ್ - ಬಸನಗೌಡ ತುರುವಿಹಾಳ
ಬಸವಕಲ್ಯಾಣ ಕ್ಷೇತ್ರ:
- ಬಿಜೆಪಿ - ಶರಣು ಸಲಗರ್
- ಕಾಂಗ್ರೆಸ್ - ಮಾಲಾ ನಾರಾಯಣ ರಾವ್
- ಜೆಡಿಎಸ್ - ಸೈಯದ್ ಯಶ್ರಬ್ ಅಲಿ ಖಾದ್ರಿ
- ಪಕ್ಷೇತರ - ಮಲ್ಲಿಕಾರ್ಜುನ ಖೂಬಾ
06:18 April 17
ಮೂರು ಕ್ಷೇತ್ರಗಳ ಉಪಚುನಾವಣೆ:
ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.
ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,821,614 ಮತದಾರರು ಹಕ್ಕು ಚಲಾಯಿಸಲಿದ್ದು, ಕ್ಷೇತ್ರದಲ್ಲಿ ಮತದಾನಕ್ಕೆ 2,566 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ 16 ಸಖಿ ಬೂತ್ಗಳಾಗಿವೆ.
ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ, 239,981 ಮತದಾರರು ಹಕ್ಕು ಚಲಾಯಿಸಲಿದ್ದು, ಕ್ಷೇತ್ರದಲ್ಲಿ ಮತದಾನಕ್ಕೆ 326 ಮತಗಟ್ಟೆಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ ಎರಡು ಸಖಿ ಬೂತ್ ಗಳು ಇರಲಿವೆ.
ಶಾಸಕ ಸ್ಥಾನಕ್ಕೆ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 206,443 ಮತದಾರರು ಹಕ್ಕು ಚಲಾಯಿಸಲಿದ್ದು. ಕ್ಷೇತ್ರದಲ್ಲಿ ಮತದಾನಕ್ಕೆ 305 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ ಇದರಲ್ಲಿ ಎರಡು ಸಖಿ ಬೂತ್ಗಳಿವೆ.
ಒಟ್ಟು ಮೂರೂ ಕ್ಷೇತ್ರಗಳಿಂದ 30 ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲ ಅಭ್ಯರ್ಥಿಗಳ ಭವಿಷ್ಯ ಇಂದು ಇವಿಎಂ ಯಂತ್ರದಲ್ಲಿ ಭದ್ರವಾಗಲಿದೆ. ಇಂದು ಚುನಾವಣೆ ನಡೆದರೂ ಮೇ 2 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶಕ್ಕಾಗಿ ಅಭ್ಯರ್ಥಿಗಳು 15 ದಿನ ಕಾಯಬೇಕಿದೆ.