ಬೆಳಗಾವಿ:ಕೊರೊನಾ ವೈರಾಣು ಸೋಂಕು ಹರಡುವ ಭೀತಿ ಹಿನ್ನೆಲೆ ಮಾರ್ಚ್ 27ರ ವರೆಗೆ ಬೆಳಗಾವಿ ಎಪಿಎಂಸಿ ಮಾರುಕಟ್ಟೆಯನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.
ಕೊರೊನಾ ಭೀತಿ ಹಿನ್ನೆಲೆ ಬೆಳಗಾವಿ ಎಪಿಎಂಸಿ ಸ್ಥಗಿತ..! - Belagavi APMC Market Locked
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಚ್ 27ರ ವರೆಗೆ ಬೆಳಗಾವಿ ಎಪಿಎಂಸಿ ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಬೆಳಗಾವಿ ಜಿಲ್ಲೆಯನ್ನು ಲಾಕ್ಡೌನ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆ ಎಪಿಎಂಸಿ ಸಹ ಬಂದ್ ಮಾಡಲಾಗಿದೆ. ಮಾರ್ಚ್ 27ರ ವರೆಗೆ ಮಾರುಕಟ್ಟೆಗೆ ಕೃಷಿ ಹುಟ್ಟುವಳಿಗಳನ್ನು ತರದಂತೆ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೈತರನ್ನು ಕೋರಿದೆ.
ಬೆಳಗಾವಿ ಎಪಿಎಂಸಿ ಕರ್ನಾಟಕ ಅಷ್ಟೇ ಅಲ್ಲದೇ ನೆರೆಯ ಮಹಾರಾಷ್ಟ್ರ ರೈತರು ಇಲ್ಲಿಗೆ ಆಗಮಿಸುತ್ತಾರೆ. ಗೋವಾಗೆ ಬೆಳಗಾವಿ ಎಪಿಎಂಸಿ ಮಾರುಕಟ್ಟೆ ಮೂಲಕ ತರಕಾರಿ ಪೂರೈಕೆ ಆಗುತ್ತದೆ. ಬೆಳಗಾವಿ ಎಪಿಎಂಸಿ ಬಂದ್ ಆಗುವುದರಿಂದ ಗೋವಾಗೆ ತರಕಾರಿ ಪೂರೈಕೆಯೂ ಸ್ಥಗಿತಗೊಳ್ಳಲಿದೆ.