ಬೆಳಗಾವಿ : ಕುಡಿದ ಮತ್ತಿನಲ್ಲಿ ಕೆಲ ದುಷ್ಕರ್ಮಿಗಳು ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದ ವೃತ್ತದಲ್ಲಿನ ಬಸವೇಶ್ವರ ಪುತ್ಥಳಿ ಭಗ್ನ ಮಾಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಬಸವೇಶ್ವರ ಪುತ್ಥಳಿ ಭಗ್ನ.. ಕಿಡಿಗೇಡಿಗಳ ಬಂಧನಕ್ಕೆ ಗ್ರಾಮಸ್ಥರ ಒತ್ತಾಯ - Belgavilatest update news
ಬಿಜಗುಪ್ಪಿ ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಬಸವೇಶ್ವರ ವೃತ್ತದಲ್ಲಿದ್ದ ಬಸವೇಶ್ವರ ಪುತ್ಥಳಿಯ ಎಡ ಕೈ ವಿರೂಪಗೊಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು, ಕಟಕೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
![ಬಸವೇಶ್ವರ ಪುತ್ಥಳಿ ಭಗ್ನ.. ಕಿಡಿಗೇಡಿಗಳ ಬಂಧನಕ್ಕೆ ಗ್ರಾಮಸ್ಥರ ಒತ್ತಾಯ Basaveshwara idol devastated](https://etvbharatimages.akamaized.net/etvbharat/prod-images/768-512-9474274-thumbnail-3x2-net.jpg)
ಬಸವೇಶ್ವರ ಪುತ್ಥಳಿ ಭಗ್ನ: ಕಿಡಿಗೇಡಿಗಳನ್ನು ಬಂಧಿಸುವಂತೆ ಗ್ರಾಮಸ್ಥರ ಒತ್ತಾಯ
ಬಸವೇಶ್ವರ ಪುತ್ಥಳಿ ಭಗ್ನ.. ಕಿಡಿಗೇಡಿಗಳ ಬಂಧನಕ್ಕೆ ಗ್ರಾಮಸ್ಥರ ಒತ್ತಾಯ
ಬಿಜಗುಪ್ಪಿ ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಬಸವೇಶ್ವರ ವೃತ್ತದಲ್ಲಿದ್ದ ಬಸವೇಶ್ವರ ಪುತ್ಥಳಿಯ ಎಡ ಕೈ ವಿರೂಪಗೊಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು, ಕಟಕೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿಗುವಿನ ವಾತಾವರಣ ನಿರ್ಮಾಣ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ. ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.