ಅಥಣಿ (ಬೆಳಗಾವಿ) : ಕೇಂದ್ರ ಬಿಜೆಪಿ ವರಿಷ್ಠರು ಪಂಚಮಸಾಲಿ ಜನಾಂಗಕ್ಕೆ ಮುಖ್ಯಮಂತ್ರಿ ಸ್ಥಾನದ ಅವಕಾಶ ಕಲ್ಪಿಸಿಕೊಡುತ್ತಾರೆಂದು ನಾಡಿನ ಸಮಾಜ ಬಾಂಧವರು ನಂಬಿದ್ದರು. ಆದರೆ, ಕಾಣದ ಕೈಗಳ ಒತ್ತಡದಿಂದ ಕೈತಪ್ಪಿ ಸಮಾಜಕ್ಕೆ ಅಗೌರವವಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ ನಮ್ಮ ಸಮಾಜದವರು, ಅವರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹಕ್ಕೊತ್ತಾಯವನ್ನು ಸರ್ಕಾರ ಕೊಟ್ಟ ಕಾಲಾವಕಾಶದೊಳಗೆ ಅನುಷ್ಠಾನಗೊಳ್ಳದಿದ್ದರೆ ಅಕ್ಟೋಬರ್1 ಮಾಜಿ ಸಿಎಂ ದಿ. ಜೆ ಹೆಚ್ ಪಟೇಲ್ ಜಯಂತಿ . ಅಂದೇ ಮತ್ತೆ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಎಂದರು.
ಪ್ರತಿಜ್ಞಾ ಪಂಚಾಯತ್ ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿಯಾನವನ್ನು, ಪಂಚಮಸಾಲಿ ಗೌಡ ಹಾಗೂ ದೀಕ್ಷಾ ಪಂಚಮಸಾಲಿ ಸಮಾಜದವರನ್ನು ಒಗ್ಗೂಡಿಸಿಕೊಂಡು ರಾಜ್ಯದ ಪ್ರತಿ ತಾಲೂಕಿನಲ್ಲೂ ಜಾಗೃತಿ ಕೈಗೊಳ್ಳಲು ನಿರ್ಧರಿಸಲಾಗಿದೆ.